ಹಿಂದೆ ಜೋಡೆತ್ತುಗಳೆಂದು ಬಿಂಬಿಸಿಕೊಂಡಿದ್ದ ಕುಮಾರಸ್ವಾಮಿ ಮತ್ತು ಶಿವಕುಮಾರ ಈಗ ಪರಸ್ಪರ ತಿವಿದಾಡುತ್ತಿದ್ದಾರೆ
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ 2019ರಲ್ಲಿ ಉಪಚುನಾವಣೆ ನಡೆದಾಗ ಕುಮಾರಣ್ಣ ಮತ್ತು ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಜೋಡೆತ್ತೆಗಳು ಅಂತ ಬಿಂಬಿಸಿಕೊಂಡಿದ್ದೂ ಹೌದು. ಅದಾದ ಮೇಲೆ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಅವರ ನಡುವೆ ಕಿತ್ತಾಟ ಶುರುವಾಗಿದೆ,
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ 2019ರಲ್ಲಿ ಉಪಚುನಾವಣೆ ನಡೆದಾಗ ಜೆಡಿ(ಎಸ್) ಅಭ್ಯರ್ಥಿ ಮತ್ತು ಆಗ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರ ವಿರುದ್ಧ ಗೆಲ್ಲಿಸಲು ಮಂಡ್ಯದೆಲ್ಲೆಡೆ ಜೊತೆಯಾಗಿ ಓಡಾಡಿದ್ದ ಕುಮಾರಣ್ಣ ಮತ್ತು ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಜೋಡೆತ್ತೆಗಳು ಅಂತ ಬಿಂಬಿಸಿಕೊಂಡಿದ್ದೂ ಹೌದು. ಅದಾದ ಮೇಲೆ ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿದಿದೆ. ಇದನ್ನು ಹೇಳುವ ಕಾರಣವೇನೆಂದರೆ ಆ ಜೋಡೆತ್ತುಗಳು ಈಗ ಪರಸ್ಪರ ತಿವಿದಾಡುತ್ತಿವೆ. ಒಬ್ಬರು ಮತ್ತೊಬ್ಬರ ವಿರುದ್ಧ ಕಾಮೆಂಟ್ ಮಾಡುತ್ತಾರೆ, ಕಾಲೆಳೆಯುತ್ತಾರೆ, ಹಂಗಿಸುತ್ತಾರೆ ಮತ್ತು ಹೀಯಾಳಿಸುತ್ತಾರೆ.
ನಿಮಗೆ ಗೊತ್ತಿದೆ, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಆಗ್ರಹಿಸಿ ಶಿವಕುಮಾರ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಜನೆವರಿ 9ರಿಂದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಇದು ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರಿಗೆ ಸರಿಕಾಣುತ್ತಿಲ್ಲ.
ಕನ್ನಡಿಗರ ಅದರಲ್ಲೂ ವಿಶೇಷವಾಗಿ ಹಳೆ ಮೈಸೂರು ಭಾಗದ ಜನರ ಪ್ರೀತಿಯನ್ನೆಲ್ಲ ಕಾಂಗ್ರೆಸ್ ನಾಯಕರು ತಮ್ಮತ್ತ ಸೆಳೆದುಬಿಡುತ್ತಾರೆ ಎನ್ನುವ ಆತಂಕ ಅವರಲ್ಲಿ ಮೂಡಿರಬಹುದು. ಹಾಗಾಗೇ ದಿನಂಪ್ರತಿ ಶಿವಕುಮಾರ ಅವರ ಕಾಲೆಳೆತ ನಡೆಯುತ್ತಿದೆ.
ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನೂ ಇಲ್ಲ ಅಂತ ಕುಮಾರ ಸ್ವಾಮಿಯವರು ಮಾಡಿರುವ ಸರಣಿ ಟ್ವೀಟ್ಗಳನ್ನು ಮಾಧ್ಯಮದವರು ಶುಕ್ರವಾರದಂದು ಬೆಂಗಳೂರಲ್ಲಿ ಡಿಕೆಶಿ ಅವರ ಗಮನಕ್ಕೆ ತಂದಾಗ, ಇತ್ತೀಚಿಗೆ ಕುಮಾರಸ್ವಾಮಿಯವರ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ, ‘ಅವರು ದೊಡ್ಡವರು, ಅವರು ಹೇಳಿದ್ದೇ ಸರಿ ಎಂದು ಪ್ರತಿಕ್ರಿಯಿಸಲು ಆರಂಭಿಸಿರುವ ಅವರು ಪುನಃ ಹಾಗೆಯೇ ಹೇಳಿದರು.
‘ಈ ರಾಜ್ಯಕ್ಕೆ ಕಾಂಗ್ರೆಸ್ ಏನೂ ಮಾಡಿಲ್ಲ, ಮಾಡಿದ್ದೆಲ್ಲ ಜೆಡಿ(ಎಸ್) ಮತ್ತು ಬಿಜೆಪಿ ಮಾತ್ರ. ಬಿಜೆಪಿ ಧುರೀಣ ಮತ್ತು ಸಚಿವ ಅಶೋಕಣ್ಣ ಹೇಳಿದ ಹಾಗೆ ಮೇಕೆ ಮಾಂಸ ತಿಂದು ಬರೋದಿಕ್ಕೆ ಮೇಕೆದಾಟುಗೆ ಹೋಗುತ್ತಿದ್ದೇವೆ,’ ಎಂದು ಮಾರ್ಮಿಕವಾಗಿ ಹೇಳಿದರು.
ಇದನ್ನೂ ಓದಿ: ನೆಟ್ಟಿಗರ ಗಮನ ಸೆಳೆದ ಕಡಲೆಕಾಯಿ ಮಾರಾಟಗಾರನ ಕಚ್ಚಾ ಬಾದಾಮ್ ಹಾಡು: ವಿಡಿಯೋ ವೈರಲ್