ಕೋವಿಡ್-19 ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ ಬಳಿಕ ಸಚಿವ ಅಶೋಕ ಸೋಂಕಿಗೊಳಗಾದರು
ತಮಗೆ ಸೋಂಕು ದೃಢಪಟ್ಟಿರುವ ಬಗ್ಗೆ ಖುದ್ದು ಸಚಿವರೇ ಟ್ವೀಟ್ ಮಾಡಿದ್ದು ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರಿಗೆ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ಕೋರಿದ್ದಾರೆ. ಆಸ್ಪತ್ರೆಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸಚಿವರು ಸೌಮ್ಯ ಸ್ವರೂಪದ ಸೋಂಕಿನಿಂದ ಬಳಲುತ್ತಿದ್ದಾರೆ.
ಕೇವಲ ಎರಡು ದಿನಗಳ ಹಿಂದೆ ರಾಜ್ಯದಲ್ಲಿ ಕೋವಿಡ್-19 ಪಿಡುಗು ಮತ್ತು ಒಮೈಕ್ರಾನ್ ರೂಪಾಂತರಿ ಸೋಂಕಿನ ಪ್ರಭಾವವನ್ನು ತಗ್ಗಿಸಲು ಅನುಸರಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂಪುಟದ ಸಹೋದ್ಯೋಗಿಗಳು, ತಜ್ಞರು ಮತ್ತು ಅಧಿಕಾರಗಳೊಂದಿಗೆ ಸಭೆ ನಡೆಸಿದ ನಂತರ ಅಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಮಾಧ್ಯಮಕ್ಕೆ ಬ್ರೀಫ್ ಮಾಡಿದ ಕಂದಾಯ ಸಚಿವ ಅರ್ ಅಶೋಕ ಅವರು ಸೋಂಕಿತರಾಗಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಗೆ ಸೋಂಕು ದೃಢಪಟ್ಟಿರುವ ಬಗ್ಗೆ ಖುದ್ದು ಸಚಿವರೇ ಟ್ವೀಟ್ ಮಾಡಿದ್ದು ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರಿಗೆ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ಕೋರಿದ್ದಾರೆ. ಆಸ್ಪತ್ರೆಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸಚಿವರು ಸೌಮ್ಯ ಸ್ವರೂಪದ ಸೋಂಕಿನಿಂದ ಬಳಲುತ್ತಿದ್ದಾರೆ.
ನನಗೆ ಕೋವಿಡ್ ದೃಢವಾಗಿದ್ದು, ಆರೋಗ್ಯವಾಗಿ ಇದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ.
— R. Ashoka (ಆರ್. ಅಶೋಕ) (@RAshokaBJP) January 7, 2022
ಅಶೋಕ ಅವರು ಬುಧವಾರದಂದು ಮಾಧ್ಯಮಗಳಿಗೆ ಮಾಹಿತಿ ನೀಡುವಾಗ ಆರೋಗ್ಯ ಸಚಿವ ಕೆ ಸುಧಾಕರ್ ಸಹ ಅವರೊಂದಿಗಿದ್ದರು. ಅದಲ್ಲದೆ ಸೋಮವಾರದಿಂದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಹಲವಾರು ಸಭೆ-ಸಮಾರಂಭ ಮತ್ತು ಸರ್ಕಾರೀ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿಗಳು ಸೇರಿದಂತೆ ಅನೇಕರು ಟೆಸ್ಟ್ ಮಾಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಬೊಮ್ಮಾಯಿ ಮತ್ತು ಅಶೋಕ ಅವರೊಂದಿಗಿದ್ದರು.
ಏತನ್ಮಧ್ಯೆ, ಕರ್ನಾಟಕದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಗತಿ ಗಾಬರಿ ಮತ್ತು ಆತಂಕ ಮೂಡಿಸುತ್ತದೆ. ರಾಜಧಾನಿ ಬೆಂಗಳೂರು ನಗರದಲ್ಲೂ ಸೋಂಕಿತರು ಸಾವಿರಗಳಲ್ಲಿ ಹೆಚ್ಚುತ್ತಿದ್ದಾರೆ. ಶುಕ್ರವಾರ ರಾತ್ರಿ ಹತ್ತರಿಂದ ಸೋಮವಾರ ಬೆಳಗಿನ ಜಾವ 5 ಗಂಟೆಯವರೆಗೆ ರಾಜ್ಯದಲ್ಲಿ ಲಾಕ್ಡೌನ್ ಹೇರಲಾಗಿದೆ.
ಇದನ್ನೂ ಓದಿ: 25 ವರ್ಷಗಳ ಹಿಂದೆ ಅಮೆಜಾನ್ ವೆಬ್ಸೈಟ್ ಬಗ್ಗೆ ಡೆಮೋ ನೀಡಿದ ವಿಡಿಯೋ ಹಂಚಿಕೊಂಡ ಸಂಸ್ಥಾಪಕ ಜೆಫ್ ಬೆಜೋಸ್