ಮದುವೆ ಸಂಭ್ರಮದ ನಡುವೆಯೂ ಊರಿನ ಶಾಲೆಗೆ ಭೇಟಿ ನೀಡಿದ ಡಾಲಿ ಧನಂಜಯ
ಡಾಲಿ ಧನಂಜಯ ಅವರ ಹುಟ್ಟೂರಿನಲ್ಲಿ ವಿವಾಹಪೂರ್ವ ಶಾಸ್ತ್ರಗಳು ಆರಂಭ ಆಗಿವೆ. ಈ ಸಂಭ್ರಮದ ನಡುವೆಯೂ ಬಿಡುವು ಮಾಡಿಕೊಂಡು ಶಾಲೆಗೆ ಭೇಟಿ ನೀಡಿದ್ದಾರೆ. ಸ್ವಂತ ಹಣದಲ್ಲಿ ಈ ಸರ್ಕಾರಿ ಶಾಲೆಗೆ ಡಾಲಿ ಅವರು ಮೂಲಭೂತ ಸೌಕರ್ಯ ಕಲ್ಪಿಸಿದ್ದಾರೆ. ಆ ಮೂಲಕ ಅವರು ಮಾದರಿ ಕೆಲಸ ಮಾಡಿದ್ದಾರೆ.
ಅರಸೀಕೆರೆ ತಾಲೂಕಿನ ಕಾಳೇನಹಳ್ಳಿ ಕೊಪ್ಪಲಿನ ಸರ್ಕಾರಿ ಶಾಲೆಗೆ ಡಾಲಿ ಧನಂಜಯ ಭೇಟಿ ನೀಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶಾಲೆಯ ಅಭಿವೃದ್ಧಿಗೆ ಧನಂಜಯ ಅವರು ಕಾರಣರಾಗಿದ್ದಾರೆ. ತಮ್ಮೂರಿನ ಶಾಲೆಗೆ ಅವರು ಮೂಲಭೂತ ಸೌಕರ್ಯ ಕಲ್ಪಿಸಿದ್ದಾರೆ. ಈಗ ಅವರ ಮದುವೆ ನಡೆಯುತ್ತಿದ್ದು, ಈ ಸಂಭ್ರಮದ ಪ್ರಯುಕ್ತ ಶಾಲೆಗೂ ದೀಪಾಲಂಕಾರ ಮಾಡಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.