ಬೆಂಗಳೂರು ಬ್ಯಾಡರಹಳ್ಳಿಯ ಪ್ಲಾಸ್ಟಿಕ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ, ಪ್ರಾಣಹಾನಿಯಿಲ್ಲ
ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಮಾಧ್ಯಮದವರಿಗೆ ಸ್ಥಳೀಯರಿಂದ ಮತ್ತು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿ ನಮ್ಮ ವರದಿಗಾರ ಮೂವರೊಂದಿಗೆ ಮಾತಾಡಿದ್ದಾರೆ, ಅದರೆ ಯಾರಿಂದಲೂ ನಿಖರವಾದ ಮಾಹಿತಿ ಸಿಕ್ಕಿಲ್ಲ. ಒಬ್ಬ ವ್ಯಕ್ತಿ ಗುಟ್ಕಾ ತಿನ್ನುತ್ತಾ ಮಾತಾಡಿದರೆ ಇನ್ನೊಬ್ಬರಿಗೆ ಕನ್ನಡ ಸರಿಯಾಗಿ ಮಾತಾಡಲು ಬರಲ್ಲ. ಸರಿಯಾಗಿ ಮಾತಾಡಿದ ಮೊದಲ ವ್ಯಕ್ತಿ ಅರ್ಧಂಬರ್ಧ ಮಾಹಿತಿ ನೀಡುತ್ತಾರೆ.
ಬೆಂಗಳೂರು: ಬೇಸಿಗೆ ಶುರುವಾಗುತ್ತಿದ್ದಂತೆ ಬೆಂಗಳೂರಲ್ಲಿ ಅಗ್ನಿ ಅವಘಡಗಳ ಪ್ರವರ ಶುರುವಾಗಿದೆ. ನಗರದ ಬ್ಯಾಡರಹಳ್ಳಿಯಲ್ಲಿರುವ ಪ್ಲಾಸ್ಟಿಕ್ ತಯಾರಿಕಾ ಘಟಕದಲ್ಲಿ ಬೆಂಕಿ ಹೊತ್ತಿಕೊಂಡು ಅದರ ಜ್ವಾಲೆಗಳು ಪಕ್ಕದ ಕಟ್ಟಡಗಳಿಗೂ ಪಸರಿಸಿವೆ. ಕೆಲಸಗಾರರು ಮಧ್ಯಾಹ್ನದ ಊಟಕ್ಕೆ ಅಂತ ಹೋದಾಗ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳುತ್ತಾರೆ. ಅದೃಷ್ಟ ವಶಾತ್ ಪ್ರಾಣಾಪಾಯವೇನೂ ಸಂಭವಿಸಿಲ್ಲ ಆದರೆ ಕಾರ್ಖಾನೆ ಮಾತ್ರ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅಗ್ನಿಶಾಮಕ ದಳದ ಸಿಬ್ಬಂಡಿ ಬೆಂಕಿಯನ್ನು ಅರಿಸುವ ಪ್ರಯತ್ನದಲ್ಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ಒಕಿನೊವಾ ಶೋರೂಮ್
Latest Videos