ಮೆಟ್ರೋ ರೈಲು ಪ್ರಯಾಣದ ಟಿಕೆಟ್ ದರಗಳನ್ನು ಇಳಿಸುವವುದು ನಮ್ಮ ಕೈಯಲ್ಲಿಲ್ಲ: ಡಿಕೆ ಶಿವಕುಮಾರ್
ಗೃಹ ಸಚಿವ ಜಿ ಪರಮೇಶ್ವರ್ ಅವರು ಸಿದ್ದರಾಮಯ್ಯನವರೇ ಐದು-ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿರುತ್ತಾರೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯೆ ಕೇಳಿದಾಗ ಮುಖಭಾವ ಬದಲಿಸಿದ ಡಿಸಿಎಂ ಶಿವಕುಮಾರ್ ತಲೆಯಲ್ಲಾಡಿಸುತ್ತ ದುರ್ದಾನ ತೆಗೆದುಕೊಂಡುವರ ಹಾಗೆ ಏನೂ ಉತ್ತರಿಸಿದೆ ನಿಂತ ಜಾಗದಿಂದ ತೆರಳಿದರು. ಬಾಯ್ಮುಚ್ಚಿಕೊಂಡಿರುವಂತೆ ಮಲ್ಲಿಕಾರ್ಜುನ ಖರ್ಗೆ ಹೇಳಿದರೂ ಕಾಂಗ್ರೆಸ್ ನಾಯಕರ ಹೇಳಿಕೆಗಳ ಪರ್ವ ಮುಂದುವರಿದಿದೆ.
ಬೆಂಗಳೂರು: ನಗರದಲ್ಲೆಡೆ ಮೆಟ್ರೋ ರೈಲು ಟಿಕೆಟ್ ದರ ಹೆಚ್ಚಳದ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ಮೆಟ್ರೋ ರೈಲು ಟಿಕೆಟ್ ಹೆಚ್ಚಳ ಕರ್ನಾಟಕ ಸರ್ಕಾರದ ಸುಪರ್ದಿಯಲ್ಲಿಲ್ಲ, ನಿವೃತ್ತ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಮಿತಿ ಅಂತ ಒಂದಿರುತ್ತದೆ, ಕೇಂದ್ರ ಸರ್ಕಾರದ ಕಾರ್ಯದರ್ಶಿಯೊಬ್ಬರು ಬಿಎಂಅರ್ಸಿಎಲ್ ಚೇರ್ಮನ್ ಅಗಿರುತ್ತಾರೆ, ಹೆಚ್ಚಿಸಿರುವ ಟಿಕೆಟ್ ದರಗಳನ್ನು ಪುನರ್ ಪರಿಶೀಲಿಸಬೇಕೆಂದು ಮುಖ್ಯಮಂತ್ರಿ ಮತ್ತು ತಾನು ಸಮಿತಿಗೆ ತಿಳಿಸಿದ್ದೇವೆ, ದರ ಫಿಕ್ಸ್ ಮಾಡಲು ಸಮಿತಿಯನ್ನ ರಚಿಸಲಾಗಿರುತ್ತದೆ, ತಮ್ಮ ಅಧಿಕಾರಿಗಳೊಂದಿಗೆ ಸಭೆಯೊಂದನ್ನು ಈಗಾಗಲೇ ನಡೆಸಲಾಗಿದೆ ಅವರು ಈ ಸಮಿತಿಯೊದಿಗೆ ಚರ್ಚೆ ನಡೆಸುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದ್ಯಾಕೆ? ನಿಜವಾದ ಕಾರಣ ಇಲ್ಲಿದೆ