ಮೆಟ್ರೋ ದರ ಏರಿಕೆ ಬಿಸಿ: BMRCL ಎಂಡಿ ಮಹತ್ವದ ಸುದ್ದಿಗೋಷ್ಠಿ
ಮೆಟ್ರೋ ಪ್ರಯಾಣಿಕರಿಗೆ ಈಗಾಗಲೇ ದರ ಏರಿಕೆ ಶಾಕ್ ತಟ್ಟಿದೆ. ಸಾಮಾನ್ಯ ದರದಲ್ಲೇ ಹಾಯಾಗಿ ಮೆಟ್ರೋದಲ್ಲಿ ಓಡಾಡುತ್ತಿದ್ದ ಲಕ್ಷಾಂತರ ಜನರಿಗೆ, ಮೆಟ್ರೋ ದರ ಏರಿಕೆ ಹೈರಾಣು ಮಾಡಿದೆ. ಅದ್ಯಾವ ಮಟ್ಟಿಗೆ ಅಂದರೆ, ಮೆಟ್ರೋ ಸಹವಾಸವೇ ಬೇಡ ಅನ್ನೋ ಮಟ್ಟಿಗೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯರೇ ಮೆಟ್ರೋ ಪ್ರಯಾಣ ದರ ಇಳಿಕೆಗೆ ಆಗ್ರಹ ಮಾಡಿದ್ದಾರೆ. ಈ ಮಧ್ಯೆ ಬಿಎಂಆರ್ಸಿಎಲ್ ಎಂ.ಡಿ ಮಹೇಶ್ವರ್ ರಾವ್ ಮಹತ್ವದ ಸುದ್ದಿಗೋಷ್ಠಿ ಮಾಡಿದ್ದಾರೆ. ಅದರ ನೇರಪ್ರಸಾರ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 13: ನಗರದ ಅಚ್ಚುಮೆಚ್ಚಿನ ಸಾರಿಗೆಯಾಗಿರುವ ನಮ್ಮ ಮೆಟ್ರೋ (metro) ಸಂಚಾರ, ದುಬಾರಿ ಟಿಕೆಟ್ ಬೆಲೆಯಿಂದಾಗಿ ಎಲ್ಲರ ವಿರೋಧಕ್ಕೆ ಕಾರಣವಾಗಿದೆ. ದರ ಏರಿಕೆ ಖಂಡಿಸಿ, ಜನರು ಬಿಜೆಪಿ ನಾಯಕರು ಬೀದಿಗಿಳಿದು ಪ್ರತಿಭಟಿಸಿದ್ದರು. ಇಷ್ಟೆಲ್ಲಾ ಆಕ್ರೋಶದ ಬಳಿಕವಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೆಟ್ರೋ ಟಿಕೆಟ್ ದರ ಇಳಿಕೆಗೆ ಮುಂದಾಗುತ್ತಾ ನೋಡಬೇಕಿದೆ. ಈ ಮಧ್ಯೆ ಬಿಎಂಆರ್ಸಿಎಲ್ ಎಂ.ಡಿ ಮಹೇಶ್ವರ ರಾವ್ ಮಹತ್ವದ ಸುದ್ದಿಗೋಷ್ಠಿ ಮಾಡಿದ್ದಾರೆ. ಅದರ ನೇರಪ್ರಸಾರ ಇಲ್ಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 13, 2025 02:36 PM