Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
ಬೂದಾಕುಂಬಳಕಾಯಿಯನ್ನು ಮನೆಗೆ ಕಟ್ಟುವುದರಿಂದ ದುಷ್ಟಶಕ್ತಿಗಳನ್ನು ದೂರವಿಡಬಹುದು ಎಂಬ ನಂಬಿಕೆ ಜನರಲ್ಲಿದೆ. ಈ ಲೇಖನದಲ್ಲಿ ಅಮಾವಾಸ್ಯೆ, ಬುಧವಾರ ಅಥವಾ ಶನಿವಾರ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಬೂದಾಕುಂಬಳಕಾಯಿಯನ್ನು ಅರಿಶಿಣ, ಕುಂಕುಮ ಮತ್ತು ಬಿಳಿ ದಾರದಿಂದ ಅಲಂಕರಿಸಿ ಮನೆಯ ಸಿಂಹದ್ವಾರದ ಬಳಿ ಕಟ್ಟುವ ವಿಧಾನವನ್ನು ವಿವರಿಸಲಾಗಿದೆ.
ಬೆಂಗಳೂರು, ಮೇ 31: ಬೂದಾಕುಂಬಳಕಾಯಿಯನ್ನು ಮನೆಗೆ ಕಟ್ಟುವುದು ಹಲವು ವರ್ಷಗಳಿಂದಲೂ ಪ್ರಚಲಿತದಲ್ಲಿರುವ ಒಂದು ಪದ್ಧತಿ. ಇದನ್ನು ಮುಖ್ಯವಾಗಿ ಗೃಹ ಪ್ರವೇಶ ಸಂದರ್ಭದಲ್ಲಿ ಮಾಡಲಾಗುತ್ತದೆ. ಆದರೆ, ಯಾವುದೇ ಸಮಯದಲ್ಲಿ ಇದನ್ನು ಮಾಡಬಹುದು ಎಂದು ಡಾ. ಬಸವರಾಜ್ ಗುರುಜಿ ಅವರು ಹೇಳುತ್ತಾರೆ. ಮನೆಯ ಈಶಾನ್ಯ ಅಥವಾ ನೈರುತ್ಯ ಭಾಗದಲ್ಲಿ ಅಥವಾ ಸಿಂಹದ್ವಾರದ ಬಳಿ ಇದನ್ನು ಕಟ್ಟಬಹುದು. ಅಮಾವಾಸ್ಯೆ, ಬುಧವಾರ ಅಥವಾ ಶನಿವಾರ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಕಟ್ಟುವುದು ಶುಭಕರ ಎಂದು ನಂಬಲಾಗುತ್ತದೆ.
Latest Videos

