ಸಾಧು ಕೋಕಿಲ ಸಿನಿಮಾ ಮಾಡೋದು ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಖ್ಯಾತ ನಟ ಸಾಧು ಕೋಕಿಲ ಅವರು ಹಾಸ್ಯ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಧು ಕೋಕಿಲ ಅವರ ಚಿತ್ರಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ಅದಕ್ಕೆ ಕಾರಣವೇನು ಎಂಬುದನ್ನು ಸ್ವತಃ ಸಾಧು ಕೋಕಿಲ ತಿಳಿಸಿದ್ದಾರೆ. ಇನ್ನೂ ಅನೇಕ ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ.
ನಟ ಸಾಧು ಕೋಕಿಲ (Sadhu Kokila) ಅವರು ಹಾಸ್ಯ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾಗಳ (Sadhu Kokila Movies) ಸಂಖ್ಯೆ ಕಡಿಮೆ ಆಗುತ್ತಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರೇ ತಿಳಿಸಿದ್ದಾರೆ. ‘ಉಪೇಂದ್ರ, ಸುದೀಪ್, ದರ್ಶನ್, ಗಣೇಶ್ ಅವರ ಸಿನಿಮಾಗಳಲ್ಲಿ ನಾನು ಮಾಡುತ್ತಿದ್ದೇನೆ. ಅವರೇ 2 ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾರೆ. ಸಣ್ಣ ಪುಟ್ಟ ಸಿನಿಮಾದವರು ನಮ್ಮನ್ನು ಕರೆಯೋಕೆ ಆಗಲ್ಲ. ನಮ್ಮ ಸಂಭಾವನೆ ಕೊಡೋದು ಕೂಡ ಅವರಿಗೆ ಕಷ್ಟ ಆಗುತ್ತದೆ. ಆದ್ದರಿಂದಾಗಿ ನಾನು ಜಾಸ್ತಿ ಕಾಣಿಸಿಕೊಳ್ಳುತ್ತಿಲ್ಲ’ ಎಂದು ಸಾಧು ಕೋಕಿಲ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: May 30, 2025 10:52 PM
Latest Videos
