Loading video

Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ

Updated on: Jun 07, 2025 | 7:08 AM

ಡಾ. ಬಸವರಾಜ್ ಗುರೂಜಿ ಅವರು ಕಷ್ಟಕಾಲದಲ್ಲಿ ಸಹಾಯ ಮಾಡುವುದರ ಮಹತ್ವವನ್ನು ಈ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಸಹಾಯ ಮಾಡುವುದು ಪವಿತ್ರ ಕಾರ್ಯವಾಗಿದ್ದು, ಅದರ ಫಲ ನಮಗೆ ಖಂಡಿತ ಸಿಗುತ್ತದೆ ಎಂದು ಅವರು ಹೇಳುತ್ತಾರೆ. ಸಹಾಯವನ್ನು ಪ್ರಚಾರ ಮಾಡಿಕೊಳ್ಳಬಾರದು ಎಂಬುದು ಅವರ ಮುಖ್ಯ ಸಂದೇಶ.

ಬೆಂಗಳೂರು, ಜೂನ್​ 07: ಡಾ. ಬಸವರಾಜ್ ಗುರೂಜಿ ಅವರು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಷ್ಟದ ಸಮಯದಲ್ಲಿ ಸಹಾಯ ಮಾಡುವುದರ ಮಹತ್ವವ ಬಗ್ಗೆ ಹೇಳಿದ್ದಾರೆ. ಸಹಾಯ ಎಂಬ ಪದದ ಪವಿತ್ರತೆಯನ್ನು ಒತ್ತಿ ಹೇಳುವ ಅವರು, ಸಹಾಯ ಮಾಡುವವರು ಭಗವಂತನ ಸ್ವರೂಪಗಳೆಂದು ವಿವರಿಸುತ್ತಾರೆ. ಆದರೆ, ಸಹಾಯವನ್ನು ಪ್ರಚಾರ ಮಾಡಿಕೊಳ್ಳುವುದರಿಂದ ಅದರ ಫಲ ನಮಗೆ ಸಿಗುವುದಿಲ್ಲ. ಶ್ರೀಕೃಷ್ಣ ಮತ್ತು ಅರ್ಜುನ, ದುರ್ಯೋಧನರ ಉದಾಹರಣೆಯ ಮೂಲಕ ಭಗವಂತನು ಯಾರಿಗೆ ಸಹಾಯ ಮಾಡುತ್ತಾನೆ ಎಂಬುದನ್ನು ಅವರು ವಿವರಿಸಿದ್ದಾರೆ.