Anekal: ಪ್ರೀತಿಸಿ ಮದುವೆಯಾದ ಪತ್ನಿಯ ಆಕ್ರಮ ಸಂಬಂಧದಿಂದ ಬೇಸತ್ತ ಪತಿ ಆಕೆಯನ್ನು ಕೊಂದು ಪೊಲೀಸ್ಗೆ ಶರಣಾದ
ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಾನಸಳ ಅಕ್ರಮ ಸಂಬಂಧ ಗೊತ್ತಾದ ನಂತರ ಶಂಕರ್ ಪತ್ನಿಯನ್ನು ಪ್ರಿಯಕರನೊಂದಿಗೆ ಕಳಿಸಿಬಿಟ್ಟಿದ್ದನಂತೆ. ಅದರೆ ಮಾನಸ ಪದೇಪದೆ ವಾಪಸ್ಸು ಬಂದು ಅವನಿಗೆ ಕಿರುಕುಳ ನೀಡುತ್ತಿದ್ದಳು. ಆಕೆಯ ಕಾಟದಿಂದ ಬೇಸತ್ತ ಶಂಕರ್ ಕೊಲೆ ಮಾಡಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿರುವ ಮಾನಸ ತಾಯಿಗೆ ಮಗಳ ಕೃತ್ಯಗಳು ಪ್ರಾಯಶಃ ಗೊತ್ತಿಲ್ಲ.
ಆನೇಕಲ್, (ಬೆಂಗಳೂರು) ಜೂನ್ 7: ಮಾಧ್ಯಮಗಳೊಂದಿಗೆ ಮಾತಾಡುತ್ತಿರುವ ಮಹಿಳೆಯ ಮಗಳು 26-ವರ್ಷ ವಯಸ್ಸಿನ ಮಾನಸಳ ಕೊಲೆ ಭೀಕರವಾಗಿ ನಡೆದಿದೆ. ಮಾನಸಳ ಪತಿ ಶಂಕರ್ (28) ಪತ್ನಿಯನ್ನು ಕೊಂದು ರುಂಡವನ್ನು ಬೇರ್ಪಡಿಸಿ ಅದನ್ನು ತನ್ನ ಬೈಕ್ ಮೇಲಿಟ್ಟುಕೊಂಡು ಸೂರ್ಯಸಿಟಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮಾನಸ ಮತ್ತು ಶಂಕರ್ಗೆ ಒಂದು ಮಗು ಕೂಡ ಇದೆ. ಅಸಲಿಗೆ ಆನೇಕಲ್ ತಾಲೂಕಿನನ ಹೀಲಲಿಗೆ ಗ್ರಾಮದಲ್ಲಿ ವಾಸವಾಗಿದ್ದ ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದರಂತೆ. ಆದರೆ ಮಾನಸ ಮತ್ತೊಬ್ಬ ವ್ಯಕ್ತಿಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು ಮತ್ತು ಆಕೆ ಪರಪುರುಷನೊಂದಿಗೆ ಹಾಸಿಗೆಯಲ್ಲಿದ್ದಿದ್ದನ್ನು ಶಂಕರ್ ಕಣ್ಣಾರೆ ನೋಡಿದ್ದ. ಅದಾದ ಬಳಿಕವೇ ಪತಿ-ಪತ್ನಿಯ ನಡುವೆ ಪದೇಪದೆ ಜಗಳ ನಡೆಯುತ್ತಿತ್ತು ಮತ್ತು ಜಗಳವಾದಾಗೆಲ್ಲ ಮಾನಸ ತನ್ನ ತಾಯಿಯ ಬಳಿ ಬರುತ್ತಿದ್ದಳು. ಅಕ್ರಮ ಸಂಬಂಧವನ್ನು ಮಾನಸ ಮುಂದುವರಿಸಿದ್ದನ್ನು ಸಹಿಸಲಾಗದ ಶಂಕರ್ ಶುಕ್ರವಾರ ರಾತ್ರಿ ಆಕೆಯನ್ನು ಕೊಂದು ರುಂಡದೊಂದಿಗೆ ಪೊಲೀಸರಿಗೆ ಶರಣಾಗಿದ್ದಾನೆ.
ಇದನ್ನೂ ಓದಿ: ಪತ್ನಿಯನ್ನು ಕೊಂದು, ಮೃತದೇಹದೊಂದಿಗೆ ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳುಹಿಸಿ, ಆತ್ಮಹತ್ಯೆ ಮಾಡಿಕೊಂಡ ಪತಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ