Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಕಾಲುಂಗುರವು ವಿವಾಹಿತ ಮಹಿಳೆಯರಿಗೆ ಪ್ರಮುಖ ಆಭರಣವಾಗಿದೆ. ಇದನ್ನು ಬೆಳ್ಳಿಯಿಂದ ಮಾಡಿಸಿಕೊಳ್ಳುವುದು ಶ್ರೇಷ್ಠ. ಕಾಲುಂಗುರ ಕಳೆದುಹೋದರೆ ಅದು ಅಶುಭ ಸೂಚನೆ ಎಂದು ಹೇಳಲಾಗುತ್ತದೆ. ಆದರೆ, ಹೊಸ ಕಾಲುಂಗುರವನ್ನು ದೇವಸ್ಥಾನದಲ್ಲಿ ಪೂಜಿಸಿ ಬಳಿಕ ಧರಿಸುವುದರಿಂದ ಶುಭವೆಂದು ಹೇಳಲಾಗುತ್ತದೆ. ಈ ಬಗ್ಗೆ ಗುರೂಜಿ ಅವರು ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಮೇ 15: ಕಾಲುಂಗುರವು ಹಿಂದೂ ಸಂಸ್ಕೃತಿಯಲ್ಲಿ ವಿವಾಹಿತ ಮಹಿಳೆಯರ ಅಲಂಕಾರವಷ್ಟೇ ಅಲ್ಲ, ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಸಾಮಾನ್ಯವಾಗಿ ಬೆಳ್ಳಿಯಿಂದ ತಯಾರಿಸಲಾಗುವ ಈ ಆಭರಣವನ್ನು ಬಂಗಾರದಿಂದ ಮಾಡಿಸಿಕೊಳ್ಳಬಾರದು ಎಂದು ಶಾಸ್ತ್ರ ಹೇಳುತ್ತದೆ. ಕಾಲುಂಗುರ ಕಳೆದುಹೋಗುವುದು ಅಶುಭ ಸೂಚನೆಯಾಗಿದ್ದು, ಕೋಪ, ದುರಾಲೋಚನೆಗಳು ಹಾಗೂ ಕುಟುಂಬದಲ್ಲಿ ಕಲಹಗಳಿಗೆ ಕಾರಣವಾಗಬಹುದು. ಕಳೆದುಹೋದ ಕಾಲುಂಗುರದ ಬದಲಿಗೆ ಹೊಸದನ್ನು ತಂದು ದೇವಸ್ಥಾನದಲ್ಲಿ ಪೂಜಿಸಿ ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.