20 ವರ್ಷದ ಹಿಂದೆಯೇ ದೈವಾರಾಧನೆ ವ್ಯಾಪಾರ ಆಗಿದೆ: ದೈವಾರಾಧಕ ತಮ್ಮಣ್ಣ ಶೆಟ್ಟಿ ಗರಂ

Updated By: ಮದನ್​ ಕುಮಾರ್​

Updated on: Dec 09, 2025 | 8:26 PM

‘ಕಾಂತಾರ’ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಅವರು ದೈವಾರಾಧನೆ ಬಗ್ಗೆ ಜನರಿಗೆ ತೋರಿಸಿದರು. ಇತ್ತೀಚೆಗೆ ಅವರು ಹರಕೆ ಕೋಲದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದ ವಿಡಿಯೋ ವೈರಲ್ ಆದ ಬಳಿಕ ಪರ-ವಿರೋಧದ ಚರ್ಚೆ ಆರಂಭ ಆಗಿದೆ. ದೈವಾರಾಧಕ ತಮ್ಮಣ್ಣ ಶೆಟ್ಟಿ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಕಾಂತಾರ’ ಸಿನಿಮಾ (Kantara) ಮೂಲಕ ರಿಷಬ್ ಶೆಟ್ಟಿ ಅವರು ದೈವಾರಾಧನೆ ಬಗ್ಗೆ ಜನರಿಗೆ ತೋರಿಸಿದರು. ಇತ್ತೀಚೆಗೆ ಅವರು ಹರಕೆ ಕೋಲದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದ ವಿಡಿಯೋ ವೈರಲ್ ಆದ ಬಳಿಕ ಪರ-ವಿರೋಧದ ಚರ್ಚೆ ಆರಂಭ ಆಗಿದೆ. ದೈವಾರಾಧಕ ತಮ್ಮಣ್ಣ ಶೆಟ್ಟಿ ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ರೀತಿಯ ದೈವ ನರ್ತಕರು ಕಳೆದ 20 ವರ್ಷಗಳ ಹಿಂದೆಯೇ ದೈವಾರಾದನೆಯನ್ನು ವ್ಯಾಪಾರ ಮಾಡಿ ಆಗಿದೆ. ರಿಷಬ್ ಶೆಟ್ಟಿ (Rishab Shetty), ವಿಜಯ್ ಕಿರಗಂದೂರು ಅವರೆಲ್ಲ ಮೂರು, ನಾಲ್ಕು ವರ್ಷಗಳ ಹಿಂದೆ ಬಂದವರು. ಜನರು ಇಂಥ ಪರಿಸ್ಥಿತಿಯಲ್ಲಿ ನಂಬಿಕೆ ಕಳೆದುಕೊಂಡಿದ್ದಾರೆ. ಅಲ್ಲದ ಸಮಯದಲ್ಲಿ, ಪ್ರಾರ್ಥನೆ ಮಾಡದೇ, ಗ್ರಾಮ ದೈವಗಳ ಒಪ್ಪಿಗೆ ಇಲ್ಲದೇ ಆ ವ್ಯಕ್ತಿಯ ಮೇಲೆ ದರ್ಶನ ಬಂದಾಗಲೇ ಅಪನಂಬಿಕೆ ಎಂಬುದು ಗೊತ್ತಾಗಿದೆ’ ಎಂದು ತಮ್ಮಣ್ಣ ಶೆಟ್ಟಿ (Thammanna Shetty) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.