ಕೊಲೆ ಕೇಸ್​ನಲ್ಲಿ ಕೋರ್ಟ್​ಗೆ ಹಾಜರಾದ ದರ್ಶನ್; ವಿಚಾರಣೆ ಸೆಪ್ಟೆಂಬರ್​ಗೆ ಮುಂದೂಡಿಕೆ

Updated on: Aug 12, 2025 | 11:38 AM

ದರ್ಶನ್ ಮತ್ತು ಇನ್ನೂ 16 ಮಂದಿ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈಗ ಈ ಪ್ರಕರಣದಲ್ಲಿ ದರ್ಶನ್ ಅವರು ಕೋರ್ಟ್​ಗೆ ಹಾಜರಿ ಹಾಕಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿ ಇದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ (Darshan) ಹಾಗೂ ಅವರ ಗ್ಯಾಂಗ್ ಬೆಂಗಳೂರಿನ 57ನೇ ಸೆಷನ್ಸ್ ಕೋರ್ಟ್​ಗೆ ಹಾಜರಿ ಹಾಕಿದೆ. ಕೋರ್ಟ್​ಗೆ ದರ್ಶನ್, ಪವಿತ್ರಾ ಹಾಗೂ ಇತರರು ಆಗಮಿಸಿದ್ದಾರೆ. ಇಂದಿನ ವಿಚಾರಣೆ ತುಂಬಾನೇ ಮಹತ್ವದ್ದಾಗಲಿದೆ. ಎಲ್ಲಾ ಆರೋಪಿಗಳು ಹಾಜಾರಾದರೆ ಇಂದೇ ಚಾರ್ಜಸ್ ಫ್ರೇಮ್ ಮಾಡುವ ಸಾದ್ಯತೆ ಇತ್ತು.  ಆದರೆ,  ಎ10 ವಿನಯ್ , ಎ15 ,ಕಾರ್ತಿಕ್ ಹಾಗೂ ಎ 16 ಕೇಶವಮೂರ್ತಿ ಮತ್ತು ಎ17 ನಿಖಿಲ್  ಕೋರ್ಟ್​​ಗೆ ಹಾಜಾರಾಗಿಲ್ಲ ಹೀಗಾಗಿ, ಸೆಪ್ಟೆಂಬರ್9 ಕ್ಕೆ ಮುಂದಿನ ದಿನಾಂಕ ವಿಚಾರಣೆಯನ್ನು  ನಿಗದಿ ಪಡಿಸಲಾಗಿದೆ.  ಆ ದಿನ ಪ್ರಕರಣದ ಎಲ್ಲಾ ಆರೋಪಿಗಳು ಹಾಜರು ಇರಬೇಕು ಎಂದು ನಿರ್ದೇಶಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.