‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನಕ್ಕೆ ಕುಟುಂಬದವರ ಹೇಳಿಕೆ

‘ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನಕ್ಕೆ ಕುಟುಂಬದವರ ಹೇಳಿಕೆ

ಮದನ್​ ಕುಮಾರ್​
|

Updated on: Jun 14, 2024 | 10:55 PM

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಹಾಗೂ ಸಹಚರರ ಜೊತೆ ಚಿತ್ರದುರ್ಗದ ಅನು ಕೂಡ ಆರೋಪಿ ಆಗಿದ್ದಾನೆ. ಆತನ ಬಂಧನದ ಬಳಿಕ ತಂದೆ ಚಂದ್ರಣ್ಣ ಹೃದಯಾಘಾತದಿಂದ ಮೃತರಾಗಿದ್ದಾರೆ. ಈಗ ಮಗ ಬರುವ ತನಕ ತಂದೆಯ ಅಂತ್ಯಸಂಸ್ಕಾರ ಮಾಡಲ್ಲ ಎಂದು ಕುಟುಂಬದವರು ಪಟ್ಟು ಹಿಡಿದಿದ್ದಾರೆ. ಅನು ಮಾಡಿದ ತಪ್ಪಿಗೆ ಕುಟುಂಬದವರು ನೋವು ಅನುಭವಿಸುವಂತಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಅನೇಕರು ಅರೆಸ್ಟ್​ ಆಗಿದ್ದಾರೆ. ಚಿತ್ರದುರ್ಗದ ಅನುಕುಮಾರ್​ ಅಲಿಯಾಸ್​ ಅನು ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇದರಿಂದ ಮನನೊಂದಿರುವ ಅನು ತಂದೆ ಚಂದ್ರಣ್ಣ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಘಟನೆಯ ಕುರಿತಂತೆ ಅನು ಕುಟುಂಬದವರು ಪ್ರತಿಕ್ರಿಯೆ ನೀಡಿದ್ದಾರೆ. ‘ಮಗ ಅರೆಸ್ಟ್​ ಆಗಿದ್ದಕ್ಕೆ ತಂದೆಗೆ ಈ ರೀತಿ ಆಗಿದೆ. ಮಗನನ್ನು ಕರೆಸಬೇಕು. ಅವನು ಇಲ್ಲದೇ ಮಣ್ಣಾಗೋಕೆ ಆಗಲ್ಲ. ಎಷ್ಟೇ ದಿನ ಆದರೂ ಇಲ್ಲೇ ಇಡುತ್ತೇವೆ. ಅನು ಬರುವವರೆಗೂ ಶವ ಎತ್ತಲ್ಲ. ಇಷ್ಟು ದಿನ ಜೊತೆಗಿದ್ದ ತಂದೆಯ ಶವ ಆತ ನೋಡದೇ ಇರೋಕೆ ಆಗಲ್ಲ’ ಎಂದು ಅನು ಸಂಬಂಧಿಕರು ಹೇಳಿದ್ದಾರೆ. ದರ್ಶನ್​ (Darshan) ಹಾಗೂ ಸಹಚರರ ಜೊತೆ ಅನು ಕೂಡ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದಾನೆ. ಈ ಕೇಸ್​ನ ತನಿಖೆ ತೀವ್ರಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.