ದರ್ಶನ್ ತಪ್ಪು ಮಾಡಿರದಿದ್ದರೆ ಜೈಲಿಗೆ ಯಾಕೆ ಹೋಗುತ್ತಿದ್ದರು? ಜಮೀರ್ ಅಹ್ಮದ್, ಸಚಿವ
ಕೊಲೆ ಆರೋಪಿ ದರ್ಶನ್ ಮತ್ತು ಸಚಿವ ಜಮೀರ್ ಅಹ್ಮದ್ ನಡುವಿನ ಗೆಳೆತನದ ಹಿನ್ನೆಲೆಯಲ್ಲೇ ನಟನನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಂದಹಾಗೆ, ಜಮೀರ್ ಅಹ್ಮದ್ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಕೂಡ ಹೌದು!
ಹಾವೇರಿ: ದರ್ಶನ್ ಬಳ್ಳಾರಿ ಸೆರೆವಾಸದ ಜೊತೆ ತಮ್ಮ ಹೆಸರು ಯಾಕೆ ಥಳುಕು ಹಾಕಿಕೊಳ್ಳುತ್ತಿದೆಯೋ ಗೊತ್ತಿಲ್ಲ, ಅವರ ಮತ್ತು ತನ್ನ ನಡುವೆ ಆತ್ಮೀಯ ಸ್ನೇಹವಿದೆ, ಇಲ್ಲ ಅಂತ ಹೇಳಲ್ಲ, ಆದರೆ ಅದೇ ಕಾರಣಕ್ಕೆ ಅವರೊಂದಿಗೆ ತನ್ನ ಹೆಸರು ಸೇರಿಸುವುದು ಸರಿಯಲ್ಲ ಎಂದು ಸಚಿವ ಬಿಜೆಡ್ ಜಮೀರ್ ಅಹ್ಮದ್ ಹೇಳಿದರು. ಅವರಿಂದ ತಪ್ಪಾಗಿರಬಹುದಾ ಎಂದು ಕೇಳಿದ ಪ್ರಶ್ನೆಗೆ ಸಚಿವ, ತಪ್ಪು ಮಾಡಿರದಿದ್ದರೆ ಜೈಲಿಗೆ ಯಾಕೆ ಹೋಗ್ತಾರೆ ಅಂತ ಮಾರ್ಮಿಕವಾಗಿ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್ ಖಾನ್ ಗೆ ಶಾಸಕ ಎನ್ ಹೆಚ್ ಕೋನರೆಡ್ಡಿ ಮನೆಯಲ್ಲಿ ಭರ್ಜರಿ ಔತಣ!
Latest Videos