ಸಚಿವ ಜಮೀರ್ ಅಹ್ಮದ್ ಖಾನ್ ಗೆ ಶಾಸಕ ಎನ್ ಹೆಚ್ ಕೋನರೆಡ್ಡಿ ಮನೆಯಲ್ಲಿ ಭರ್ಜರಿ ಔತಣ!

ಹಿಂದೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋನರೆಡ್ಡಿಯವರ ಮನೆಗೆ ಭೇಟಿ ನೀಡಿದಾಗಲೂ ಅವರಿಗೆ ಭೂರಿ ಭೋಜನದ ಔತಣ ಏರ್ಪಡಿಸಲಾಗಿತ್ತು.ಸಿದ್ದರಾಮಯ್ಯ ಜೋಳದ ರೊಟ್ಟಿ ಊಟವನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಕಳೆದ ತಿಂಗಳು ಕೊಪ್ಪಳದಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ ಮನೆಯಲ್ಲಿ ಅವರು ರೊಟ್ಟಿ ಊಟ ಮಾಡಿದ್ದರು.

ಸಚಿವ ಜಮೀರ್ ಅಹ್ಮದ್ ಖಾನ್ ಗೆ ಶಾಸಕ ಎನ್ ಹೆಚ್ ಕೋನರೆಡ್ಡಿ ಮನೆಯಲ್ಲಿ ಭರ್ಜರಿ ಔತಣ!
|

Updated on: Sep 02, 2024 | 3:07 PM

ಧಾರವಾಡ: ನವಲಗುಂದ ಕಾಂಗ್ರೆಸ್ ಶಾಸಕ ಎನ್ ಹೆಚ್ ಕೋನರೆಡ್ಡಿ ಅತಿಥಿ ಸತ್ಕಾರ ಮಾಡುವುದರಲ್ಲಿ ಎತ್ತಿದ ಕೈ. ಇವತ್ತು ಮನೆಗೆ ಭೇಟಿ ನೀಡಿದ ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಕೋನರೆಡ್ಡಿ ಭರ್ಜರಿ ಔತಣ ಏರ್ಪಡಿಸಿದ್ದರು. ಉತ್ತರ ಮತ್ತು ಮುಂಬೈ ಕರ್ನಾಟದ ಮನೆಗಳಲ್ಲಿ ಅತಿಥಿಗಳಿಗಾಗಿ ಬಗೆಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಜಮೀರ್, ಕೋನರೆಡ್ಡಿ ಮತ್ತು ಇತರ ನಾಯಕರು ಊಟಕ್ಕೆ ಕುಳಿತಿರುವ ಡೈನಿಂಗ್ ಟೇಬಲ್ ಮೇಲೆ ಅವುಗಳ ನಮೂನೆಯನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕರ್ನಾಟಕ ಸರ್ಕಾರದ ಉಚಿತ ಯೋಜನೆಗಳ ಪ್ರವರವನ್ನು ಹಂಪಿ ಉತ್ಸವದಲ್ಲೂ ಮುಂದುವರಿಸಿದ ಸಚಿವ ಜಮೀರ್ ಅಹ್ಮದ್ ಖಾನ್!

Follow us