AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಜಿ ಸಲ್ಲಿಸಲು ಬರುವ ಯುವಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಪೊಲೀಸರಿಗೆ ಪರಮೇಶ್ವರ್ ಸೂಚನೆ

ಅರ್ಜಿ ಸಲ್ಲಿಸಲು ಬರುವ ಯುವಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಪೊಲೀಸರಿಗೆ ಪರಮೇಶ್ವರ್ ಸೂಚನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 03, 2024 | 2:03 PM

Share

ಗೃಹ ಸಚಿವರ ನಿವಾಸ ಮುಂದೆ ಪೊಲೀಸ್ ದರ್ಪದ ಪ್ರಕರಣಗಳು ಪದೇಪದೆ ನಡೆಯುತ್ತ್ತಿದ್ದರೆ ಸಿಎಂ ಸಿದ್ದರಾಮಯ್ಯ ನಿವಾಸದ ಎದುರು ಕಾವಲು ನಿಲ್ಲುವ ಪೊಲೀಸರು ಇಂಥ ದುಸ್ಸಾಹಸಗಳಿಗೆ ಮುಂದಾಗಲ್ಲ. ನಮ್ಮದೂ ಗೃಹ ಇಲಾಖೆ ಎಂಬ ಧೋರಣೆ ಪೊಲೀಸರಿಗೆ ದರ್ಪ ಮೆರೆಯಲು ಪ್ರೇರೇಪಿಸುತ್ತಿದ್ದರೆ ಅದು ಸರಿಯಲ್ಲ.

ಬೆಂಗಳೂರು: ಪಿಎಸ್ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥವಾ ಬೇರೆ ಯಾವುದೋ ಕೆಲಸದ ನಿಮಿತ್ತ ತಮ್ಮ ನಿವಾಸದ ಬಳಿ ಅರ್ಜಿ ಸಲ್ಲಿಸಲು ಬರುವ ಯುವಕರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ವಿಷಾದ ವ್ಯಕ್ತಪಡಿಸುತ್ತ ಪೊಲೀಸರು ಮಾಡಿದ್ದ್ದು ತಪ್ಪು ಎಂದರು. ನಂತರ ಯುವಕರ ಮೇಲೆ ದರ್ಪ ಮೆರೆದ ಪೊಲೀಸ್ ಇನ್ಸ್​ಪೆಕ್ಟರ್ ನನ್ನು ಹತ್ತಿರಕ್ಕೆ ಕರೆದು ಮತ್ತೊಮ್ಮೆ ಹಾಗೆ ಮಾಡಬಾರದೆಂದು ಸೂಚನೆ ನೀಡಿದರಲ್ಲದೆ ವಶಕ್ಕೆ ಪಡೆದ ಯುವಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾರ್ಕಳ ಪ್ರಕರಣವನ್ನು ಸೆನ್ಸಿಟೈಸ್ ಮಾಡಲು ಬಿಡಲ್ಲ, ತಪ್ಪಿತಸ್ಥರಿಗೆ ಕಾನೂನುರೀತ್ಯಾ ಕ್ರಮ: ಪರಮೇಶ್ಬರ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More