ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ 1 ಯಾರೆಂದು ಪೊಲೀಸರಿಗಷ್ಟೇ ಗೊತ್ತು: ಪರಮೇಶ್ವರ್
ಕೆಐಎಡಿಬಿ ಸೈಟುಗಳ ಹಂಚಿಕೆ ಸಂಬಂಧಿಸಿದಂತೆ ಸಚಿವ ಎಂಬಿ ಪಾಟೀಲ್, ಕಾನೂನಾತ್ಮಕವಾಗಿ ಅರ್ಹರಾಗಿರುವವರಿಗೆ ಮಾತ್ರ ಸೈಟುಗಳನ್ನು ನೀಡಲಾಗಿದೆ, ಹಂಚಿಕೆಯಲ್ಲಿ ಅಕ್ರಮ ಜರುಗಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆಂದು ಪರಮೇಶ್ವರ್ ಹೇಳಿದರು.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ, 90ದಿನಗಳೊಳಗೆ ಅದನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕು, ಪ್ರಕರಣದಲ್ಲಿ ಆರೋಪಿ ನಂಬರ್ 1 ಯಾರು ನಂಬರ್ 2 ಯಾರು ಅಂತ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಲಿರುವ ಪೊಲೀಸರಿಗೆ ಮಾತ್ರ ಗೊತ್ತಿರುತ್ತದೆ ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದರು. ಬಿಜೆಪಿ ನಾಯಕರು ಸುಖಾಸುಮ್ಮನೆ ಮಾಡುತ್ತಿರುವ ಎಲ್ಲ ಆರೋಪಗಳಿಗೆ ಸರ್ಕಾರ ಸರಿಯಾದ ಉತ್ತರ ನೀಡುತ್ತಿದೆ ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಟ ದರ್ಶನ್ ಗೆ ಸರ್ಜಿಕಲ್ ಚೇರ್ ಒದಗಿಸುವ ವಿಚಾರ ಜೈಲಧಿಕಾರಿಗಳ ಸುಪರ್ದಿಗೆ ಬಿಟ್ಟಿದ್ದು: ಪರಮೇಶ್ವರ್
Latest Videos