ಮೈ ಮೇಲೆ ದರ್ಶನ್ ಟ್ಯಾಟೂ, ತಲೆಯಲ್ಲಿ ಖೈದಿ ನಂಬರ್: ಫ್ಯಾನ್ ಅವತಾರ ನೋಡಿ..
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಸಂಕಷ್ಟ ಎದುರಾಗಿದೆ. ಜೈಲಿನಲ್ಲಿ ಕಾಲ ಕಳೆಯುತ್ತಿರುವ ಅವರ ಬಗ್ಗೆ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಪ್ರೀತಿ ತೋರಿಸುತ್ತಿದ್ದಾರೆ. ಖೈದಿ ನಂಬರ್ 6106 ಬಗ್ಗೆ ದರ್ಶನ್ ಫ್ಯಾನ್ಸ್ಗೆ ಏನೋ ಒಂಥರಾ ಕ್ರೇಜ್. ಇಲ್ಲೊಬ್ಬ ಅಭಿಮಾನಿಯು ತಲೆ ಮೇಲೆ 6106 ನಂಬರ್ ಕಾಣುವ ರೀತಿಯಲ್ಲಿ ಹೇರ್ಸ್ಟೈಲ್ ಮಾಡಿಕೊಂಡಿದ್ದಾರೆ.
ನಟ ದರ್ಶನ್ ಅವರನ್ನು ಸಿಕ್ಕಾಪಟ್ಟೆ ಇಷ್ಟಪಡುವ ಜನರು ಇದ್ದಾರೆ. ಅಭಿಮಾನ ತೋರಿಸಲು ಜನರು ಹಲವು ದಾರಿ ಹಿಡಿಯುತ್ತಾರೆ. ಕೊಲೆ ಕೇಸ್ನಲ್ಲಿ ದರ್ಶನ್ ಅವರು ಜೈಲು ಸೇರಿದ ಬಳಿಕ ಅವರಿಗೆ 6106 ಖೈದಿ ನಂಬರ್ ನೀಡಲಾಯಿತು. ಅದನ್ನು ವಾಹನಗಳ ಮೇಲೆ ಹಾಕಿಸಿಕೊಂಡವರು ಹಲವರಿದ್ದಾರೆ. ಚಿಕ್ಕ ಮಗುವಿಗೂ ಖೈದಿ ನಂಬರ್ 6106 ಹಾಕಿಸಿ ಖುಷಿಪಟ್ಟಿದ್ದು ಕೂಡ ವೈರಲ್ ಆಗಿತ್ತು. ಈಗ ಅಭಿಮಾನಿಯೊಬ್ಬರು ತಲೆಯಲ್ಲಿ ಇದೇ ನಂಬರ್ನಿಂದ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಅಲ್ಲದೇ ತೋಳಿನ ಮೇಲೆ ಡಿ ಬಾಸ್ ಎಂದು ಟ್ಯಾಟೂ ಹಾಕಿಸಿಕೊಂಡು ಖುಷಿಪಟ್ಟಿದ್ದಾರೆ. ಆ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.