ಮಾಜಿ ಮ್ಯಾನೇಜರ್ ನಾಪತ್ತೆಯಲ್ಲಿ ದರ್ಶನ್ ಕೈವಾಡ ಆರೋಪ; ಸ್ಪಷ್ಟನೆ ಕೊಟ್ಟಿಲ್ಲವೇಕೆ ಮಲ್ಲಿಕಾರ್ಜುನ?

Updated on: Apr 16, 2026 | 3:45 PM

ಮಲ್ಲಿಕಾರ್ಜುನ ಅವರು ದರ್ಶನ್ ಮಾಜಿ ಮ್ಯಾನೇಜರ್ ಆಗಿದ್ದರು. ಅವರು ಕಾಣೆ ಆದರು. ರೇಣುಕಾಸ್ವಾಮಿ ಕೊಲೆ ಕೇಸ್​ ಅಲ್ಲಿ ಯಾವಾಗ ದರ್ಶನ್ ಹೆಸರು ಕೇಳಿ ಬಂತೋ ಆಗ ಮಲ್ಲಿಕಾರ್ಜುನ್ ಕಾಣೆ ಆಗಲು ದರ್ಶನ್ ಕಾರಣ ಎಂದು ಹೇಳಲಾಯಿತು. ಈ ವಿಷಯದಲ್ಲಿ ಅವರು ಸ್ಪಷ್ಟನೆ ಏಕೆ ಕೊಟ್ಟಿಲ್ಲ? ಈ ಬಗ್ಗೆ ಮಲ್ಲಿಕಾರ್ಜುನ ಅವರು ಸ್ಪಷ್ಟನೆ ನೀಡಿದ್ದಾರೆ.

ಮಲ್ಲಿಕಾರ್ಜುನ ಅವರು ದರ್ಶನ್ ಮಾಜಿ ಮ್ಯಾನೇಜರ್ ಆಗಿದ್ದರು. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಸಿಕ್ಕಿ ಬೀಳುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಅವರು ಕಾಣೆಯಾಗಿ ಹಲವು ವರ್ಷಗಳೇ ಕಳೆದಿದ್ದವು. ಇದರಲ್ಲಿ ದರ್ಶನ್ ಕೈವಾಡ ಇದೆ ಎಂಬ ಆರೋಪ ಕೇಳಿಬಂದವು. ಈ ವಿಷಯ ಸಾಕಷ್ಟು ಚರ್ಚೆ ಆಯಿತು. ಆದರೆ, ಮಲ್ಲಿಕಾರ್ಜುನ ಅವರು ಮಾತ್ರ ಸ್ಪಷ್ಟನೆ ನೀಡಲು ಬರಲಿಲ್ಲ. ಹೀಗೆಕೆ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ. ಇದನ್ನು ಹೇಳಲು ಬರಬೇಕು ಎಂದಾಗ ಎದುರಾದ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More