‘ನೀವು ದರ್ಶನ್ ಸಿನಿಮಾದಲ್ಲಿ ಕಪ್ಪೇ ಇದ್ರಲ್ಲ ಸರ್’; ಸತೀಶ್ ಶಾಕ್
ನಟ ದರ್ಶನ್ ಅವರ ಸಿನಿಮಾದಲ್ಲಿ ಡಾಗ್ ಸತೀಶ್ ನಟಿಸಿದ್ದರು. ಈ ಸಿನಿಮಾದ ಹೆಸರು ಕೂಡ ದರ್ಶನ್ ಎಂದು. ಈಚಿತ್ರದಲ್ಲಿ ನಾನೇ ಸೆಕೆಂಡ್ ಹೀರೋ ಎಂದು ಅವರು ಹೇಳಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರ ದೇಹದ ಬಣ್ಣದ ಬಗ್ಗೆ ಚರ್ಚೆ ಆಗಿತ್ತು. ಈಗ ಡಾಗ್ ಸತೀಶ್ ಈ ಬಗ್ಗೆ ಮಾತನಾಡಿದ್ದಾರೆ.
21 ವರ್ಷಗಳ ಹಿಂದೆ ‘ದರ್ಶನ್’ ಹೆಸರಿನ ಚಿತ್ರದಲ್ಲಿ ದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ಸತೀಶ್ ಕೂಡ ಇದ್ದರು. ತಮ್ಮನ್ನು ಈ ಸಿನಿಮಾದಲ್ಲಿ ಕಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದರು. ಈಗ ಅವರು ಈ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನ ನೀಡುವಾಗಲೇ ಸಿನಿಮಾದಲ್ಲಿ ಕೆಲಸ ಮಾಡಿದ ವ್ಯಕ್ತಿಯನ್ನು ಕರೆದು, ‘ನಾನು ಆಗ ಕಪ್ಪಿದ್ನಾ ಅಥವಾ ಬೆಳ್ಳಗಿದ್ನಾ’ ಎಂದು ಕೇಳಿದ್ದಾರೆ. ಇದಕ್ಕೆ ಅವರು ಕಪ್ಪಗೇ ಇದ್ರಲ್ಲ ಸರ್ ಎಂದಿದ್ದಾರೆ. ನಂತರ ಬಣ್ಣ ಹಚ್ಚಿ ಅವರನ್ನು ಕಪ್ಪು ಮಾಡಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 27, 2026 11:08 AM
