ದರ್ಶನ್​ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ನಾನು ಜನವರಿಯಲ್ಲೇ ಹೇಳಿದ್ದೆ; ಮನೋ ವೈದ್ಯೆ

Edited By:

Updated on: Jun 22, 2024 | 8:48 AM

ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿಯ ಪ್ರಾಣವೇ ಹೋಗಿದೆ. ಇದಕ್ಕೆ ದರ್ಶನ್ ಕಾರಣ ಎನ್ನಲಾಗಿದೆ. ದರ್ಶನ್ ಮನಸ್ಥಿತಿ ಬಗ್ಗೆ ಮನೋವೈದ್ಯೆ ಚಂದ್ರಿಕಾ ಮಾತನಾಡಿದ್ದಾರೆ. ದರ್ಶನ್​ಗೆ ಕೌನ್ಸಲಿಂಗ್ ಅಗತ್ಯವಿದೆ ಎಂದು ನಾನು ಆಗಲೇ ಹೇಳಿದ್ದೆ ಎಂದಿದ್ದಾರೆ ವೈದ್ಯೆ.

ದರ್ಶನ್ (Darshan) ಅವರು ಇತ್ತೀಚೆಗೆ ಸಾಕಷ್ಟು ಅಗ್ರೆಸ್ಸಿವ್ ಆಗಿದ್ದರು. ಸಣ್ಣ ವಿಚಾರಕ್ಕೂ ಅವರಿಗೆ ಸಾಕಷ್ಟು ಕೋಪ ಬರುತ್ತಿತ್ತು. ಇದೇ ಅವರಿಗೆ ಮುಳುವಾಗಿದೆ. ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾ ಸ್ವಾಮಿಯ ಪ್ರಾಣವೇ ಹೋಗಿದೆ. ಇದಕ್ಕೆ ದರ್ಶನ್ ಕಾರಣ ಎನ್ನಲಾಗಿದೆ. ದರ್ಶನ್ ಮನಸ್ಥಿತಿ ಬಗ್ಗೆ ಮನೋವೈದ್ಯೆ ಚಂದ್ರಿಕಾ ಮಾತನಾಡಿದ್ದಾರೆ. ‘ಜನವರಿ-ಫೆಬ್ರವರಿಯಲ್ಲಿ ದರ್ಶನ್ ಅವರ ವಿಡಿಯೋ ನೋಡಿದೆ. ಅವರಲ್ಲಿ ಸಾಕಷ್ಟು ನೆಗೆಟಿವ್ ಥಾಟ್ ಇತ್ತು. ಚಿತ್ರರಂಗದಲ್ಲಿ ಗೊತ್ತಿದ್ದವರಿಗೆ ಮೆಸೇಜ್ ಮಾಡಿದೆ. ದರ್ಶನ್​ಗೆ ಕೌನ್ಸಲಿಂಗ್ ಮಾಡಿಸಿ ಎಂದಿದ್ದೆ. ಅವರನ್ನು ನಿಯಂತ್ರಿಸಬೇಕು ಎಂದು ಕರೆದಿದ್ದೆ’ ಎಂದಿದ್ದಾರೆ ಚಂದ್ರಿಕಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More