ಮಕ್ಕಳು ದರ್ಶನ್ ಅಭಿಮಾನಿಯಾದ ತಪ್ಪಿಗೆ ಕುಟುಂಬದವರು ಎದುರಿಸುತ್ತಿರೋ ಕಷ್ಟ ಒಂದೆರಡಲ್ಲ
ನಂದೀಶ್ ಮಂಡ್ಯ ತಾಲೂಕಿನ ಚಾಮಲಪುರ ಗ್ರಾಮದವರು. ಜೈಲಲ್ಲಿರುವ ಮಗನ ನೋಡಲು ಬೆಂಗಳೂರಿಗೆ ಬರಲಾಗದೆ ನಂದೀಶ್ ಹೆತ್ತವರು ಒದ್ದಾಡುತ್ತಿದ್ದಾರೆ. ಸ್ನೇಹಿತರೊಬ್ಬರು ವಾಹನ ವ್ಯವಸ್ಥೆ ಮಾಡಿ ಕೊಟ್ಟರು. ಆದರೆ, ಡಿಸೇಲ್ಗೆ ಹಣ ಹೊಂದಿಸಲಾಗಿಲ್ಲ.
ನಟ ದರ್ಶನ್ (Darshan) ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಕೊಲೆ ನಡೆದಿದೆ. ಈ ಘಟನೆ ನಡೆದು ಎರಡು ವಾರ ಕಳೆಯುತ್ತಾ ಬಂದಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಅರೆಸ್ಟ್ ಆಗುವುದರ ಜೊತೆಗೆ ಇನ್ನೂ ಅನೇಕರ ಬಂಧನ ಆಗಿದೆ. ದರ್ಶನ್ ನಂಬಿ ಜೈಲು ಸೇರಿದವರ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಇತ್ತೀಚೆಗಷ್ಟೆ ಆರೋಪಿ ಅನುಕುಮಾರ್ ತಂದೆ ನಿಧನ ಹೊಂದಿದರು. ಈಗ ಪ್ರಕರಣ ಐದನೇ ಆರೋಪಿ ನಂದೀಶ್ ಫ್ಯಾಮಿಲಿ ಕಣ್ಣೀರಿನ ಕಥೆ ಹೊರಬಿದ್ದಿದೆ.
ನಂದೀಶ್ ಮಂಡ್ಯ ತಾಲೂಕಿನ ಚಾಮಲಪುರ ಗ್ರಾಮದವರು. ಜೈಲಲ್ಲಿರುವ ಮಗನ ನೋಡಲು ಬೆಂಗಳೂರಿಗೆ ಬರಲಾಗದೆ ನಂದೀಶ್ ಹೆತ್ತವರು ಒದ್ದಾಡುತ್ತಿದ್ದಾರೆ. ಸ್ನೇಹಿತರೊಬ್ಬರು ವಾಹನ ವ್ಯವಸ್ಥೆ ಮಾಡಿ ಕೊಟ್ಟರು. ಆದರೆ, ಡಿಸೇಲ್ಗೆ ಹಣ ಹೊಂದಿಸಲಾಗಿಲ್ಲ. ನಂದೀಶ್ ತಾಯಿ ಭಾಗ್ಯಮ್ಮ ಅಸ್ತಮ ಖಾಯಿಲೆಯಿಂದ ತೀವ್ರ ಬಳಲುತ್ತಿದ್ದಾರೆ. ಮಾಧ್ಯಮದವರನ್ನ ಹೊರತುಪಡಿಸಿ ಮನೆ ಬಳಿಗೆ ಸೌಜನ್ಯಕ್ಕೂ ದರ್ಶನ್ ಅಭಿಮಾನಿಗಳು, ಆಪ್ತರು ಭೇಟಿ ನೀಡಿಲ್ಲ.
ನಂದೀಶ್ ಬಿಡುಗಡೆಗೆ ಪ್ರಯತ್ನಿಸೋಣ ಎಂದರೆ ಅದು ಕನಸಿನ ಮಾತು ಎಂಬಂತಾಗಿದೆ. ಬೆಂಗಳೂರಿಗೆ ಬರೋಕೆ ಹಣವಿಲ್ಲ. ಹೀಗಿರುವಾಗ ವಕೀಲರನ್ನ ನೇಮಿಸಿಕೊಳ್ಳೋದು ಹೇಗೆ? ಅವರಿಗೆ ಹಣ ನೀಡೋದು ಹೇಗೆ? ‘ದರ್ಶನ್ ಅಭಿಮಾನಿ ಎನಿಸಿಕೊಂಡ ಯಾರೊಬ್ಬರು ನಮ್ಮ ಕಷ್ಟ ಕೇಳಲಿಲ್ಲ’ ಎಂದು ಮಾಧ್ಯಮಗಳ ಮುಂದೆ ನಂದೀಶ್ ಅಕ್ಕ ನಂದಿನಿ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ದರ್ಶನ್-ಪ್ರೇಮ್ ಸಿನಿಮಾ ಆರಂಭವಾಗುತ್ತ? ಅಥವಾ ನಿಲ್ಲುತ್ತಾ?
ದರ್ಶನ್ ಜೊತೆ ಬಂಧನಕ್ಕೆ ಒಳಗಾದ ಎಲ್ಲಾ ಅಭಿಮಾನಿಗಳದ್ದು ಒಂದೊಂದು ರೀತಿಯ ಕಥೆ ಇದೆ. ಬಹುತೇಕರ ಕುಟುಂಬ ಕಷ್ಟದಲ್ಲಿಯೇ ಇದೆ. ದರ್ಶನ್ ಸೇರಿ ಕೆಲವೇ ಕೆಲವು ಮಂದಿ ವಕೀಲರ ನೇಮಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.