ಜೈಲಿನಲ್ಲಿ ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ ಸಹಚರರಿಗೆ ಮಟನ್​ ಊಟ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಜೈಲು ಪಾಲಾಗಿದ್ದಾರೆ. ಅವರ ಜೊತೆ ಇನ್ನೂ ಕೆಲವು ಸಹಚರರು ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿಕೊಂಡಿರುವ ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ನ ಸಹಚರರಿಗೆ ಇಂದು (ಜೂನ್​ 21) ಬಾಡೂಟ ನೀಡಲಾಗಿದೆ. ಕಾರಾಗೃಹದ ಮೆನು ಅನುಸಾರ ಮಟನ್​, ಚಪಾತಿ, ಮುದ್ದೆ ಹಾಗೂ ಅನ್ನ ನೀಡಲಾಗಿದೆ.

ಜೈಲಿನಲ್ಲಿ ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ ಸಹಚರರಿಗೆ ಮಟನ್​ ಊಟ
ಪವಿತ್ರಾ ಗೌಡ
Follow us
| Updated By: ಮದನ್​ ಕುಮಾರ್​

Updated on: Jun 21, 2024 | 10:30 PM

ಇಷ್ಟು ದಿನ ಐಷಾರಾಮಿ ಜೀವನ ಸಾಗಿಸುತ್ತಿದ್ದ ನಟಿ ಪವಿತ್ರಾ ಗೌಡ (Pavithra Gowda) ಈಗ ಜೈಲು ವಾಸು ಅನುಭವಿಸುತ್ತಿದ್ದಾರೆ. ರೇಣುಕಾ ಸ್ವಾಮಿ (Renuka Swamy) ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅವರು ಜೈಲು ಸೇರಿ ಇಂದಿಗೆ ಎರಡು ದಿನ ಕಳೆದಿದೆ. ಎರಡನೇ ದಿನವಾದ ಇಂದು (ಜೂನ್​ 21) ಪವಿತ್ರಾ ಗೌಡ ಅವರ ಪರಪ್ಪನ ಅಗ್ರಹಾರ ಜೈಲಿಯಲ್ಲಿ ಮಟನ್​ ಊಟ (Non Veg Food) ಸೇವಿಸಿದ್ದಾರೆ! ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

ಪರಪ್ಪನ ಅಗ್ರಹಾರ ಜೈಲು ಮೆನುವಿನಂತೆ ಇಂದು (ಜೂನ್​ 21) ನಾನ್ ವೆಜ್ ಊಟ ನೀಡಲಾಗಿದೆ. ಆರೋಪಿಗಳಾಗಿರುವ ಪವಿತ್ರಾ ಗೌಡ ಹಾಗೂ ಇತರ ಸಹಚರರಿಗೆ ಜೈಲಿನಲ್ಲಿ ನಾನ್​-ವೆಜ್​ ಊಟ ಕೊಡಲಾಗಿದೆ. ಕಾರಾಗೃಹ ಸಿಬ್ಬಂದಿಯು ಮಟನ್ ಊಟ ನೀಡಿದ್ದಾರೆ. ಮೆನುವಿನ ಪ್ರಕಾರ ಮಟನ್, ಮುದ್ದೆ, ಚಪಾತಿ, ರೈಸ್ ನೀಡಲಾಗಿದೆ. ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್​ನವರು ಬಾಡೂಟ ಸೇವಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಪವಿತ್ರಾ ಗೌಡಗೆ ಸಿಕ್ಕ ವಿಚಾರಣಾಧೀನ ಕೈದಿ ನಂಬರ್ ಏನು?

ಸಂಜೆ 8 ಗಂಟೆಯ ಸುಮಾರಿಗೆ ಕಾರಾಗೃಹ ಸಿಬ್ಬಂದಿಯು ಊಟ ನೀಡಿದರು. ಊಟ ಮಾಡಿದ ಬಳಿಕ ಮಹಿಳಾ ವಿಭಾಗದ ಡಿ ಬ್ಯಾರಕ್​ನಲ್ಲಿ ಪವಿತ್ರಾ ಗೌಡ ಮೌನಕ್ಕೆ ಜಾರಿದರು. ತಮಗೆ ಎಂಥ ಪರಿಸ್ಥಿತಿ ಎದುರಾಯ್ತು ಎಂದು ಅವರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಇಂದು ಪವಿತ್ರಾ ಗೌಡ ಪೋಷಕರ ಜೈಲಿಗೆ ಭೇಟಿ ನೀಡಿದ್ದರು. ಆಗಲೂ ಕೂಡ ಪವಿತ್ರಾ ಅತ್ತರು. ಸರಿಯಾಗಿ ಊಟ, ನಿದ್ರೆ ಮಾಡದೇ ಅವರು ಚಡಪಡಿಸುತ್ತಿದ್ದಾರೆ.

ಇದನ್ನೂ ಓದಿ: ಮಾಧ್ಯಮಗಳ ಕ್ಯಾಮೆರಾ ಕಂಡು ಗರಂ ಆದ ಪವಿತ್ರಾ ಗೌಡ ಸಹೋದರ; ಇಲ್ಲಿದೆ ವಿಡಿಯೋ

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನು ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್​ ಕಳಿಸಿದ್ದ ಎನ್ನಲಾಗಿದೆ. ಆ ಕಾರಣದಿಂದ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್​ನಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು ಎಂಬ ಆರೋಪ ದರ್ಶನ್​, ಪವಿತ್ರಾ ಗೌಡ ಹಾಗೂ ಸಹಚರರ ಮೇಲಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ