ಬಾಲಿವುಡ್ ನಟನ ಅಡುಗೆ ಭಟ್ಟನ ದಿನದ ಸಂಬಳ ಎರಡು ಲಕ್ಷ
ಬಾಲಿವುಡ್ ಸ್ಟಾರ್ ನಟ-ನಟಿಯರದ್ದು ಅತ್ಯಂತ ಐಶಾರಾಮಿ ಜೀವನ ಶೈಲಿ. ಒಬ್ಬ ಸ್ಟಾರ್ ನಟ ತನಗೆ ಅಡುಗೆ ಮಾಡಲೆಂದು ಶೆಫ್ ಅನ್ನು ನೇಮಿಸಿಕೊಂಡಿದ್ದು ಆತನ ದಿನದ ಸಂಬಳ ಎರಡು ಲಕ್ಷ ರೂಪಾಯಿಯಂತೆ!
ಬಾಲಿವುಡ್ (Bollywood) ನಟ-ನಟಿಯರ ಜೀವನಶೈಲಿ ಅತ್ಯಂತ ಐಶಾರಾಮಿ. ಬಾಲಿವುಡ್ನ ಬಹುತೇಕ ಸ್ಟಾರ್ ನಟ-ನಟಿಯರು ಶ್ರೀಮಂತ ಕುಟುಂಬದವರೇ ಆಗಿದ್ದು, ಅವರ ಈಗಿನ ಜೀವನ ಶೈಲಿ ಸಹ ಐಶಾರಾಮಿಯದ್ದೇ ಆಗಿದೆ. ಸಿನಿಮಾದ ಪ್ರೊಡಕ್ಷನ್ ಕಾಸ್ಟ್ ಹೆಚ್ಚಾಗುತ್ತಿರುವುದಕ್ಕೆ ಸಿನಿಮಾದ ಸ್ಟಾರ್ ನಟ-ನಟಿಯರು ಮಾಡುವ ಡಿಮ್ಯಾಂಡ್ಗಳೇ ಕಾರಣ ಎಂಬ ಚರ್ಚೆ ಎದ್ದಿದ್ದು, ಬಾಲಿವುಡ್ನ ಕೆಲವು ಸಿನಿಮಾ ನಿರ್ಮಾಪಕರು ಒಟ್ಟಾಗಿ ಈ ಬಗ್ಗೆ ಚರ್ಚೆ ನಡೆಸಿ ಕೆಲವು ನಿರ್ಧಾರಗಳನ್ನು ಸಹ ತೆಗೆದುಕೊಂಡಿದ್ದಾರೆ. ಈ ವಿಷಯವಾಗಿ ಮೊದಲಿನಿಂದಲೂ ತಕರಾರು ಎತ್ತುತ್ತಲೇ ಇದ್ದ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್, ಸಂದರ್ಶನವೊಂದರಲ್ಲಿ ಸ್ಟಾರ್ ನಟ-ನಟಿಯರ ದುಬಾರಿ ಜೀವನ ಶೈಲಿಯ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್ನ ನಟರೊಬ್ಬರು ಖಾಸಗಿ ಶೆಫ್ ಒಬ್ಬರನ್ನು ಇಟ್ಟುಕೊಂಡಿದ್ದಾರೆ. ಆ ನಟನಿಗೆ ಸೂಟ್ ಆಗುವಂಥಹಾ ಅಡುಗೆ ಮಾಡಿ ಕೊಡಲು ಆ ಶೆಫ್ ಪ್ರತಿದಿನ ಎರಡು ಲಕ್ಷ ರೂಪಾಯಿ ಸಂಬಳ ತೆಗೆದುಕೊಳ್ಳುತ್ತಾನೆ ಎಂದಿದ್ದಾರೆ. ತಾವು ಖುದ್ದಾಗಿ ಇದನ್ನು ಕಂಡಿರುವುದಾಗಿ ಹೇಳಿರುವ ಅನುರಾಗ್ ಕಶ್ಯಪ್, ‘ನನಗೆ ಹಲವು ಆಹಾರಗಳ ಅಲರ್ಜಿ ಇದೆ, ಹಾಗಾಗಿ ಶೆಫ್ ಮಾಡಿಕೊಡುವ ವಿಶೇಷ ಹೆಲ್ತಿ ಆಹಾರವನ್ನಷ್ಟೆ ತಿನ್ನುತ್ತೇನೆ’ ಎಂದಿದ್ದರಂತೆ ಆ ನಟ.
‘ಆ ಶೆಫ್ ಅದ್ಯಾವುದಾವುದೋ ತರಕಾರಿ, ಬೀಜಗಳನ್ನು ಬೆರೆಸಿ ವಿಚಿತ್ರವಾದ ತುಸುವೇ ಆಹಾರ ಮಾಡಿಕೊಡುತ್ತಾನೆ ಅದನ್ನು ಮಾತ್ರ ಆ ಸ್ಟಾರ್ ತಿನ್ನುತ್ತಾನೆ. ನಾನು ಆ ಅಡುಗೆಯನ್ನು ಒಮ್ಮೆ ನೋಡಿದೆ. ಏನಿದು? ಮನುಷ್ಯರು ತಿನ್ನುವುದಾ ಇಲ್ಲ ಹಕ್ಕಿಗಳಿಗೆ ತಿನ್ನಿಸುವುದಾ? ಎನಿಸಿಬಿಟ್ಟಿತು’ ಎಂದಿದ್ದಾರೆ ಅನುರಾಗ್ ಕಶ್ಯಪ್.
ಇದನ್ನೂ ಓದಿ:Virat Kohli: ಬ್ರ್ಯಾಂಡ್ ವ್ಯಾಲ್ಯೂನಲ್ಲಿ ಬಾಲಿವುಡ್ ಸ್ಟಾರ್ಗಳನ್ನೇ ಹಿಂದಿಕ್ಕಿದ ವಿರಾಟ್ ಕೊಹ್ಲಿ
ನಟ ನಟಿಯರಿಂದ ಸಿನಿಮಾದ ಬಜೆಟ್ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿರುವ ಅನುರಾಗ್, ‘ನಟ-ನಟಿಯರು ಮಾಡುವ ಡಿಮ್ಯಾಂಡ್ಗಳನ್ನು ಪೂರೈಸುವುದರಲ್ಲೇ ಸಿನಿಮಾದ ಕಾಲು ಭಾಗ ಬಜೆಟ್ ಹೊರಟು ಹೋಗುತ್ತದೆ. ಸೆಟ್ಗಳಲ್ಲಿ ಚಿತ್ರೀಕರಿಸಿದರೆ ಹೇಗೋ ಮ್ಯಾನೇಜ್ ಮಾಡಬಹುದು, ಒಂದೊಮ್ಮೆ ಅರಣ್ಯದಲ್ಲೆಲ್ಲೋ ಶೂಟಿಂಗ್ ಇದೆ ಎಂದುಕೊಳ್ಳೋಣ, ನಟಿಗೆ ಬೇಕಾದ ಬರ್ಗರ್ ತೆಗೆದುಕೊಂಡು ಬರಲು ಗಾಡಿಯೊಂದು ಮೂರು ಕಿ.ಮೀ ಜರ್ನಿ ಮಾಡಿಕೊಂಡು ನಗರಕ್ಕೆ ಹೋಗಿ ಬರಬೇಕು, ಇಂಥಹುಗಳಲ್ಲಿಯೇ ಬಜೆಟ್ ಹೊರಟುಹೋಗುತ್ತದೆ’ ಎಂದಿದ್ದಾರೆ.
‘ಸಿಂಗಲ್ ಎಂಟ್ರಿ ಕ್ಯಾರಾವ್ಯಾನ್, ಅವರಿಗೆ ಬೇಕಾದ ಹೋಟೆಲ್ನಿಂದಲೇ ದುಬಾರಿ ಊಟ, ಅವರ ಕೈಗೊಂದು, ಕಾಲಿಗೊಂದು ಆಳು, ಅವರು ಜೊತೆಗೆ ಕರೆದುಕೊಂಡು ಬರುವ 10-15 ಸಿಬ್ಬಂದಿಯ ದಿನದ ಭತ್ಯೆ, ಅವರ ಏಜೆಂಟರುಗಳು ಕೇಳುವ ಎಲ್ಲ ಸೌಲಭ್ಯಗಳು. ಇದನ್ನೆಲ್ಲ ಸರಬರಾಜು ಮಾಡುವಷ್ಟರಲ್ಲಿ ನಿರ್ಮಾಪಕನ ಜೇಬು ಖಾಲಿ ಆಗಿರುತ್ತದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 pm, Fri, 21 June 24