ಡಾಲಿ ಧನಂಜಯ ನಟನೆಯ ‘ಕೋಟಿ’ ಸಿನಿಮಾ ನೋಡಿ ಮೆಚ್ಚಿದ ಪ್ರತಾಪ್ ಸಿಂಹ
‘ಜಿಯೋ ಸ್ಟುಡಿಯೋಸ್’ ನಿರ್ಮಾಣ ಮಾಡಿರುವ ‘ಕೋಟಿ’ ಸಿನಿಮಾದಲ್ಲಿ ಡಾಲಿ ಧನಂಜಯ್, ಮೋಕ್ಷಾ ಕುಶಾಲ್ ಜೋಡಿಯಾಗಿ ನಟಿಸಿದ್ದಾರೆ. ಪರಮ್ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಸಿನಿಮಾ. ಮೈಸೂರಿಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ‘ಕೋಟಿ’ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಕಿರುತೆರೆ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಹೊಂದಿರುವ ಪರಮ್ (ಪರಮೇಶ್ವರ ಗುಂಡ್ಕಲ್) ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ಕೋಟಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ (Daali Dhananjaya) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಪರಮ್ ಅವರು ಮೊದಲ ಸಿನಿಮಾದಲ್ಲೇ ಕೌಟುಂಬಿಕ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಸಿನಿಮಾವನ್ನು ನೀಡಿದ್ದಾರೆ. ಈಗ ‘ಕೋಟಿ’ ಸಿನಿಮಾ (Kotee Movie) ಎರಡನೇ ವಾರದಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಹಂತದಲ್ಲಿ ಚಿತ್ರತಂಡಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ (Prathap Simha) ಅವರ ಬೆಂಬಲ ಸಿಕ್ಕಿದೆ.
‘ಕೋಟಿ’ ಸಿನಿಮಾದಲ್ಲಿ ಕಾಮನ್ ಮ್ಯಾನ್ ಕುರಿತಾದ ಕಥೆ ಇದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ ಅವರ ಜೊತೆ ರಮೇಶ್ ಇಂದಿರಾ, ತಾರಾ, ರಂಗಾಯಣ ರಘು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ ಪ್ರೇಕ್ಷಕರಿಂದ ಮೆಚ್ಚಗೆ ಸಿಗುತ್ತಿದೆ. ಅಲ್ಲದೇ, ದುನಿಯಾ ವಿಜಯ್ ಅವರ ವಿಶೇಷ ಪಾತ್ರವೂ ಸಿನಿಮಾದ ಹೈಲೈಟ್ ಆಗಿದೆ. ಈ ಸಿನಿಮಾವನ್ನು ‘ಜಿಯೋ ಸ್ಟುಡಿಯೋಸ್’ ನಿರ್ಮಾಣ ಮಾಡಿದೆ.
ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ‘ಕೋಟಿ’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೈಸೂರಿನ ಮಂದಿ ಕೂಡ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈಗ ಪ್ರತಾಪ್ ಸಿಂಹ ಕೂಡ ಸಿನಿಮಾ ನೋಡಿ ‘ಕೋಟಿ’ ಕಹಾನಿಯನ್ನು ಮನಸಾರೆ ಹೊಗಳಿದ್ದಾರೆ. ಈ ಮೊದಲು ಡಾಲಿ ಪ್ರೆಸೆಂಟ್ ಮಾಡಿದ್ದ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾವನ್ನು ಕೂಡ ಪ್ರತಾಪ್ ಸಿಂಹ ನೋಡಿ ಹೊಗಳಿದ್ದರು.
ಇದನ್ನೂ ಓದಿ: Kotee Movie Review: ಸಾವ್ಕಾರನಿಗೆ ಆಟ, ‘ಕೋಟಿ’ಗೆ ಪ್ರಾಣ ಸಂಕಟ
‘ಕೋಟಿ’ ಸಿನಿಮಾದಲ್ಲಿ 5 ಹಾಡುಗಳಿವೆ. ವಾಸುಕಿ ವೈಭವ್ ಅವರು ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್ ಹಾಗೂ ವಾಸುಕಿ ವೈಭವ್ ಅವರು ಸಾಹಿತ್ಯ ಬರೆದಿದ್ದಾರೆ. ‘777 ಚಾರ್ಲಿ’ ಖ್ಯಾತಿಯ ನೊಬಿನ್ ಪೌಲ್ ಅವರು ‘ಕೋಟಿ’ಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ‘ಕಾಂತಾರ’ ಸಿನಿಮಾದಿಂದ ಪ್ರಶಂಸೆ ಪಡೆದ ಪ್ರತೀಕ್ ಶೆಟ್ಟಿ ಅವರು ‘ಕೋಟಿ’ ಸಿನಿಮಾಗೆ ಸಂಕಲನ ಮಾಡಿದ್ದಾರೆ. ಕಿರುತೆರೆಯ ಖ್ಯಾತ ಸಿನಿಮಾಟೋಗ್ರಾಫರ್ ಅರುಣ್ ಅವರು ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.