ರಾಕೇಶ್ ಪೂಜಾರಿ ಪ್ರತಿಭೆ ಕಂಡು ದರ್ಶನ್ ಕೂಡ ಫೋಟೋ ತೆಗೆಸಿಕೊಂಡಿದ್ರು: ರಘು

Updated By: ಮದನ್​ ಕುಮಾರ್​

Updated on: May 13, 2025 | 8:50 PM

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ನಿಧನರಾಗಿದ್ದು ತೀರಾ ನೋವಿನ ಸಂಗತಿ. ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅಪ್ಪಟ ಕಲಾವಿದನ್ನು ಕಳೆದುಕೊಂಡಂತೆ ಆಗಿದೆ. ನಟ ದರ್ಶನ್ ಕೂಡ ರಾಕೇಶ್ ಪೂಜಾರಿ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಆ ಬಗ್ಗೆ ರಾಕೇಶ್ ಸ್ನೇಹಿತ ರಘು ಮಾತನಾಡಿದ್ದಾರೆ.

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ (Rakesh Poojary) ನಿಧನರಾಗಿದ್ದು ತೀರಾ ನೋವಿನ ಸಂಗತಿ. ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅಪ್ಪಟ ಕಲಾವಿದನ್ನು ಕಳೆದುಕೊಂಡಂತೆ ಆಗಿದೆ. ನಟ ದರ್ಶನ್ (Darshan) ಕೂಡ ರಾಕೇಶ್ ಪೂಜಾರಿ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಆ ಬಗ್ಗೆ ರಾಕೇಶ್ ಸ್ನೇಹಿತ ರಘು (Seerunde Raghu) ಮಾತನಾಡಿದ್ದಾರೆ. ‘ಒಮ್ಮೆ ದರ್ಶನ್ ಅವರು ರಾಕೇಶ್​ನ ಪ್ರತಿಭೆಯನ್ನು ಗುರುತಿಸಿ, ಬಂದು ಮಾತನಾಡಿಸಿ ಫೋಟೋ ತೆಗೆಸಿಕೊಂಡಿದ್ದರು. 60 ಜನರ ನಡುವೆ ಅವನನ್ನು ಗುರುತಿಸುತ್ತಾರೆ ಎಂದರೆ ಅವನಲ್ಲಿ ವಿಶೇಷ ಪ್ರತಿಭೆ ಇದೆ ಅಂತ ಅರ್ಥ’ ಎಂದಿದ್ದಾರೆ ರಘು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.