ಜೈಲಿನಲ್ಲಿರುವ ದರ್ಶನ್ ಪರಿಸ್ಥಿತಿ ನೆನೆದು ಭಾವುಕರಾದ ಅಳಿಯ ಮನೋಜ್

Updated on: Sep 25, 2025 | 8:13 PM

ನಟ ದರ್ಶನ್ ಅವರು ಜೈಲಿಯಲ್ಲಿ ಕಷ್ಟಪಡುತ್ತಿದ್ದಾರೆ. ಇದರಿಂದ ಅವರ ಆಪ್ತರಿಗೆ ನೋವಾಗಿದೆ. ದರ್ಶನ್ ಅಳಿಯ ಮನೋಜ್ ಅವರು ‘ಗಾರ್ಡನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವಾಗ ಅವರು ದರ್ಶನ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ದರ್ಶನ್ ಪರಿಸ್ಥಿತಿ ಬಗ್ಗೆ ಮಾತನಾಡಿದರೆ ತಾವು ಭಾವುಕರಾಗುವುದಾಗಿ ಅವರು ಹೇಳಿದ್ದಾರೆ.

ನಟ ದರ್ಶನ್ (Darshan) ಅವರು ಜೈಲಿಯಲ್ಲಿ ಕಷ್ಟಪಡುತ್ತಿದ್ದಾರೆ. ಇದರಿಂದ ಅವರ ಆಪ್ತರಿಗೆ ನೋವಾಗಿದೆ. ದರ್ಶನ್ ಅಳಿಯ ಮನೋಜ್ ಅವರು ‘ಗಾರ್ಡನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ಅವರು ದರ್ಶನ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ‘ನಮ್ಮ ಕಷ್ಟಕಾಲದಲ್ಲಿ ದರ್ಶನ್ ಅವರು ಕೈ ಹಿಡಿದು ಬೆಳೆಸಿದ್ದಾರೆ. ಅವರು ವಿಷ ಕೊಡಿ ಅಂತ ಹೇಳಿದ್ದು ಕೇಳಿ ತುಂಬಾ ಬೇಜಾರು ಆಯ್ತು. ಅಲ್ಲಿ ಏನು ಪರಿಸ್ಥಿತಿ ಇದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ’ ಎಂದು ಮನೋಜ್ (Manoj) ಹೇಳಿದ್ದಾರೆ. ದರ್ಶನ್ ಪರಿಸ್ಥಿತಿ ಬಗ್ಗೆ ಮಾತನಾಡಿದರೆ ತಾವು ಭಾವುಕರಾಗುವುದಾಗಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.