ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ
Darshan Thoogudeepa: ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ನ್ಯಾಯಾಲಯಕ್ಕೆ ಇಂದು (ಮೇ 20) ಹಾಜರಾಗಿದ್ದಾರೆ. ಕಳೆದ ಬಾರಿಯ ಕಲಾಪಕ್ಕೆ ಅವರು ಗೈರು ಹಾಜರಾಗಿದ್ದರು. ಆ ಬಗ್ಗೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ಈ ತಿಂಗಳ ವಿಚಾರಣೆಗೆ ದರ್ಶನ್ ಹಾಗೂ ಇತರೆ ಆರೋಪಿಗಳು ತಪ್ಪದೆ ಹಾಜರಾಗಿದ್ದಾರೆ.
ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪಿ ದರ್ಶನ್ ನ್ಯಾಯಾಲಯಕ್ಕೆ ಇಂದು (ಮೇ 20) ಹಾಜರಾಗಿದ್ದಾರೆ. ಕಳೆದ ಬಾರಿ ವಿಚಾರಣೆ ನಡೆದಾಗ ದರ್ಶನ್ ಗೈರು ಹಾಜರಾಗಿದ್ದರು. ಆ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಆರೋಪಿಗಳು ಕಡ್ಡಾಯವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ದರ್ಶನ್ ಪರ ವಕೀಲರಿಗೆ, ನ್ಯಾಯಾಧೀಶರು ತಿಳಿಸಿದ್ದರು. ಅದರಂತೆ ಈ ಬಾರಿ ನಟ ದರ್ಶನ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ದರ್ಶನ್ ತಮ್ಮ ಬಿಳಿ ಬಣ್ಣದ ರೇಂಜ್ ರೋವರ್ ಕಾರಿನಲ್ಲಿ ಕೋರ್ಟ್ ಬಳಿ ಬಂದರು. ದರ್ಶನ್ ಜೊತೆಗೆ ಆಪ್ತ ಧನ್ವೀರ್ ಗೌಡ ಸಹ ಜೊತೆಗೆ ಇದ್ದರು. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos