ಬರ್ತ್ಡೇ ದಿನ ಹೊಸ ಹೀರೋಗಳಿಗೆ ಕಿವಿಮಾತು ಹೇಳಿದ ನಟ ದರ್ಶನ್
ನಟ ದರ್ಶನ್ ಅವರು ಚಿತ್ರರಂಗಕ್ಕೆ ಬಂದ 25 ವರ್ಷಗಳು ಕಳೆದಿವೆ. ಅವರಿಗೆ ಸಾಕಷ್ಟು ಅನುಭವ ಇದೆ. ಹೊಸ ಸಿನಿಮಾಗಳು ಜನರಿಗೆ ತಲುಪುತ್ತಿಲ್ಲ ಎನ್ನುವ ಮಾತು ಚಾಲ್ತಿಯಲ್ಲಿದೆ. ಹಾಗೇಕೆ ಎನ್ನುವ ಪ್ರಶ್ನೆಗೆ ದರ್ಶನ್ ಕಡೆಯಿಂದ ಉತ್ತರ ಸಿಕ್ಕಿದೆ. ಅವರಿಗೆ ಕಿವಿಮಾತು ಸಿಕ್ಕಿದೆ.
ದರ್ಶನ್ (Darshan) ಅವರಿಗೆ ಇಂದು (ಫೆಬ್ರವರಿ 16) ಬರ್ತ್ಡೇ ಸಂಭ್ರಮ. ಅವರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ದರ್ಶನ್ ಚಿತ್ರರಂಗಕ್ಕೆ ಕಾಲಿಟ್ಟು ಎರಡೂವರೆ ದಶಕ ಕಳೆದಿದೆ. ಅವರಿಗೆ ಬಣ್ಣದ ಲೋಕದಲ್ಲಿ ಸಾಕಷ್ಟು ಅನುಭವ ಇದೆ. ಅವರು ಅನೇಕರಿಗೆ ಮಾದರಿ. ಹೊಸಬರಿಗೆ ದರ್ಶನ್ ಅವರು ಕಿವಿಮಾತು ಹೇಳಿದ್ದಾರೆ. ಹೊಸ ಸಿನಿಮಾಗಳು ಜನರಿಗೆ ತಲುಪುತ್ತಿಲ್ಲ ಎನ್ನುವ ಮಾತಿದೆ. ಹಾಗೇಕೆ ಎನ್ನುವ ಪ್ರಶ್ನೆಗೆ ದರ್ಶನ್ ಕಡೆಯಿಂದ ಉತ್ತರ ಸಿಕ್ಕಿದೆ. ‘ಹೊಸ ಹೀರೋಗಳು ಬೀದಿಗೆ ಇಳಿಯಬೇಕು. ನಾವೇ ಎಷ್ಟು ಇಳಿತೀವಿ ನೋಡ್ತೀರಲ್ಲ. ಒಳಗೆ ಕೂತ್ರೆ ಯಾರೂ ಬರಲ್ಲ’ ಎಂದಿದ್ದಾರೆ. ಈ ಮೂಲಕ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ