‘ಮೊದಲು ಮಣ್ಣು ಹೊರುವುದು ಕಲಿಯಲಿ’: ಚಿತ್ರರಂಗಕ್ಕೆ ಮಗನ ಎಂಟ್ರಿ ಬಗ್ಗೆ ದರ್ಶನ್​ ಮಾತು

ನಟ ದರ್ಶನ್​ ಅವರ ಪುತ್ರ ವಿನೀಶ್​ಗೆ ಚಿತ್ರರಂಗದಲ್ಲಿ ಆಸಕ್ತಿ ಇದೆ. ಸ್ಯಾಂಡಲ್​ವುಡ್​ಗೆ ಪುತ್ರ ಎಂಟ್ರಿ ನೀಡುವುದು ಯಾವಾಗ ಎಂಬ ಪ್ರಶ್ನೆಗೆ ದರ್ಶನ್​ ಅವರು ಉತ್ತರ ನೀಡಿದ್ದಾರೆ. ಇಂದು (ಫೆ.16) ಹುಟ್ಟುಹಬ್ಬದ ಪ್ರಯುಕ್ತ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್​ ಅವರು ಈ ಕುರಿತು ಮಾತನಾಡಿದ್ದಾರೆ. ಅಲ್ಲದೇ, ಒಂದಷ್ಟು ಇಂಟರೆಸ್ಟಿಂಗ್​ ವಿಷಯಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಮೊದಲು ಮಣ್ಣು ಹೊರುವುದು ಕಲಿಯಲಿ’: ಚಿತ್ರರಂಗಕ್ಕೆ ಮಗನ ಎಂಟ್ರಿ ಬಗ್ಗೆ ದರ್ಶನ್​ ಮಾತು
ವಿನೀಶ್​, ದರ್ಶನ್​
Follow us
ಮದನ್​ ಕುಮಾರ್​
|

Updated on: Feb 16, 2024 | 12:29 PM

ಸ್ಟಾರ್​ ನಟರ ಮಕ್ಕಳು ಚಿತ್ರರಂಗಕ್ಕೆ ಬರುವುದು ವಾಡಿಕೆ. ‘ಚಾಲೆಂಜಿಂಗ್ ಸ್ಟಾರ್​’ ದರ್ಶನ್​ ಅವರ ಮಗ ವಿನೀಶ್​ ತೂಗುದೀಪ (Darshan son Vineesh) ಕೂಡ ಸ್ಯಾಂಡಲ್​ವುಡ್​ಗೆ ಕಾಲಿಡುವುದು ಖಚಿತ. ಆದರೆ ಅದಕ್ಕೆ ಸಮಯ ಕೂಡಿಬರಬೇಕು. ದರ್ಶನ್​ ನಟನೆಯ ‘ಮಿ. ಐರಾವತ’ ಹಾಗೂ ‘ಯಜಮಾನ’ ಸಿನಿಮಾಗಳಲ್ಲಿ ವಿನೀಶ್​ಗೆ (Vineesh) ಅತಿಥಿ ಪಾತ್ರವಿತ್ತು. ಪೂರ್ಣಪ್ರಮಾಣದಲ್ಲಿ ದರ್ಶನ್​ (Darshan) ಪುತ್ರ ಚಿತ್ರರಂಗಕ್ಕೆ ಕಾಲಿಡುವುದು ಯಾವಾಗ ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ದರ್ಶನ್​ ಅವರು ನೇರ ಉತ್ತರ ನೀಡಿದ್ದಾರೆ. ‘ಮೊದಲು ಮಣ್ಣು ಹೊರುವುದು ಕಲಿಯಲಿ. ಆಮೇಲೆ ನೋಡಿಕೊಳ್ಳೋಣ’ ಎಂದು ಅವರು ಹೇಳಿದ್ದಾರೆ.

ಇಂದು (ಫೆಬ್ರವರಿ 16) ದರ್ಶನ್​ ಜನ್ಮದಿನ. ಆ ಪ್ರಯುಕ್ತ ಆರ್​ಆರ್​ ನಗರದ ಅವರ ನಿವಾಸದ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದಾರೆ. ದೂರದ ಊರುಗಳಿಂದ ಬಂದಿರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ಕಂಡು ಖುಷಿಪಟ್ಟಿದ್ದಾರೆ. ಕೆಲವರು ಆರತಿ ಬೆಳಗಿದ್ದಾರೆ. ಆ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಈ ನಡುವೆ ಮಾಧ್ಯಮಗಳ ಜೊತೆ ದರ್ಶನ್​ ಮಾತನಾಡಿದ್ದಾರೆ.

ಮಾಧ್ಯಮಗಳ ಜೊತೆ ದರ್ಶನ್​ ಮಾತು:

ಸಿನಿಮಾಗಳು ಯಾಕೆ ತಡವಾಗುತ್ತವೆ ಎಂಬುದನ್ನು ದರ್ಶನ್​ ವಿವರಿಸಿದ್ದಾರೆ. ‘ಮೊದಲು ನಮಗೆ ಮಾನಿಟರ್​ ಇರಲಿಲ್ಲ. 30 ಅಥವಾ 40 ದಿನದಲ್ಲಿ ಶೂಟಿಂಗ್​ ಮಾಡುತ್ತಿದ್ದೆವು. ಕ್ಯಾಮೆರಾಮ್ಯಾನ್​ ಮತ್ತು ಡೈರೆಕ್ಟರ್​ ನೋಡಿ ಫೈನಲ್​ ಎಂದು ಹೇಳಿದರೆ ಮುಗಿದು ಹೋಗುತ್ತಿತ್ತು. ಆದರೆ ಈಗ ಮಾನಿಟರ್​ ಬಂದಿದೆ. ಯಾವನೋ ಫ್ರೆಂಡ್​ ಬಂದು, ಮಾನಿಟರ್​ ನೋಡಿ ಅವನು ಏನಾದರೂ ಸಲಹೆ ನೀಡಿ ಒನ್​ ಮೋರ್​ ಎಂದರೂ ಕೂಡ ನಾವು ಒನ್​ ಮೋರ್​ ಮಾಡುತ್ತೇವೆ. ತಾಂತ್ರಿಕವಾಗಿ ಮಾನಿಟರ್​ನಿಂದ ಸಾಕಷ್ಟು ಬದಲಾವಣೆ ಆಗಿದೆ. ಮುಂದಕ್ಕೆ ಹೋಗುತ್ತಿದ್ದೇವೆ. ಆದರೂ ಕಷ್ಟ ಆಗುತ್ತಿದೆ’ ಎಂದು ದರ್ಶನ್​ ಹೇಳಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಚಿತ್ರಕ್ಕಾಗಿ ಕೈ ಜೋಡಿಸಿದ ದರ್ಶನ್​-ತರುಣ್; ‘ಕಾಟೇರ’ ಬಳಿಕ ಸಿಂಧೂರ ಲಕ್ಷ್ಮಣನ ಕಥೆ

‘ನಾವು ಚಿತ್ರರಂಗಕ್ಕೆ ಬಂದು ಇಷ್ಟು ವರ್ಷವಾದರೂ ಇನ್ನೂ ಜೀರೋದಲ್ಲಿ ಇದ್ದೇವೆ. ಏನಾದರೂ ಮಾಡಬೇಕು. ಕಳೆದ ವರ್ಷ ಎರಡು ಸಿನಿಮಾ ಮಾಡಿದ್ದೇನೆ. ಪ್ರತಿ ವರ್ಷ ಎರಡು ಸಿನಿಮಾ ಮಾಡಲು ನಾನು ಪ್ರಯತ್ನಿಸುತ್ತೇನೆ. ಆದರೆ ಸೆಟ್​ಗಳು ಹಾಕಬೇಕು. ಅದಕ್ಕೆಲ್ಲ ಸ್ವಲ್ಪ ತಡವಾಗುತ್ತದೆ’ ಎಂದು ದರ್ಶನ್​ ಹೇಳಿದ್ದಾರೆ. ಸದ್ಯ ಅವರು ‘ಡೆವಿಲ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಆ ಸಿನಿಮಾದಿಂದ ಫಸ್ಟ್​ಲುಕ್​ ಟೀಸರ್​ ಬಿಡುಗಡೆ ಆಗಿದೆ. ಅದನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಜೊತೆಗೆ 59ನೇ ಸಿನಿಮಾ ಕೂಡ ಘೋಷಣೆ ಆಗಿದೆ. ‘D59’ ಸಿನಿಮಾಗೆ ತರುಣ್​ ಸುಧೀರ್​ ನಿರ್ದೇಶನ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ಐತಿಹಾಸಿಕ ಕಥೆ ಇರಲಿದ್ದು, ಈಗಾಗಲೇ ಸ್ಕ್ರಿಪ್ಟ್​ ಕೆಲಸಗಳಿಗೆ ಚಾಲನೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್