Rukmini Vasanth: ಪರ ಭಾಷೆಯಿಂದ ನಟಿ ರುಕ್ಮಿಣಿ ವಸಂತ್ಗೆ ಬರುತ್ತಿದೆ ಭರ್ಜರಿ ಆಫರ್
ವಿಜಯ್ ಸೇತುಪತಿ ನಟನೆಯ 51ನೇ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ ಆಗಿದ್ದಾರೆ. ಇದು ಅವರ ನಟನೆಯ ಮೊದಲ ಚಿತ್ರವಾಗಿದೆ. ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಇದಲ್ಲದೆ, ಶಿವಕಾರ್ತಿಕೇಯ ನಟನೆಯ 23ನೇ ಚಿತ್ರಕ್ಕೂ ರುಕ್ಮಿಣಿ ನಾಯಕಿ ಆಗಿದ್ದಾರೆ. ಅವರನ್ನು ಹುಡುಕಿ ಹಲವು ಸಿನಿಮಾ ಆಫರ್ಗಳು ಬರುತ್ತಿವೆ.
ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ‘ಸೈಡ್ ಎ’ ಹಾಗೂ ‘ಸೈಡ್ ಬಿ’ ಚಿತ್ರದಿಂದ ನಟಿ ರುಕ್ಮಿಣಿ ವಸಂತ್ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಈ ಸಿನಿಮಾದಲ್ಲಿ ರುಕ್ಮಿಣಿ (Rukmini Vasanth) ಅವರ ನಟನೆ ಗಮನ ಸೆಳೆದಿದೆ. ಅವರು ಭಾವನಾತ್ಮಕವಾಗಿ ಎಲ್ಲರನ್ನೂ ಸೆಳೆದುಕೊಂಡಿದ್ದಾರೆ. ಈ ಚಿತ್ರ ತೆಲುಗಿನಲ್ಲೂ ಡಬ್ ಆಗಿ ರಿಲೀಸ್ ಆಗಿತ್ತು. ಹೀಗಾಗಿ ಪರ ರಾಜ್ಯದಲ್ಲೂ ಗಮನ ಸೆಳೆದರು ರುಕ್ಮಿಣಿ. ಈ ಕಾರಣಕ್ಕೆ ಪರ ಭಾಷೆಗಳಿಂದ ಅವರನ್ನು ಹಲವು ಆಫರ್ಗಳು ಹುಡುಕಿ ಬರುತ್ತಿವೆ.
ರುಕ್ಮಿಣಿ ಅವರ ಬೇಡಿಕೆ ಭರ್ಜರಿಯಾಗಿ ಏರಿಕೆ ಆಗಿದೆ. ಅವರು ಶ್ರೀಮುರಳಿ ನಟನೆಯ ‘ಭಗೀರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್ಕುಮಾರ್ ನಟನೆಯ ‘ಭೈರತಿ ರಣಗಲ್’ ಚಿತ್ರಕ್ಕೂ ರುಕ್ಮಿಣಿ ನಾಯಕಿ ಆಗಿದ್ದಾರೆ. ಈ ಎರಡೂ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇದರ ಜೊತೆಗೆ ಅವರಿಗೆ ಎರಡು ತಮಿಳು ಸಿನಿಮಾ ಕೂಡ ಸಿಕ್ಕಿದೆ.
ವಿಜಯ್ ಸೇತುಪತಿ ನಟನೆಯ 51ನೇ ಚಿತ್ರಕ್ಕೆ ರುಕ್ಮಿಣಿ ನಾಯಕಿ. ಇದು ಅವರ ನಟನೆಯ ಮೊದಲ ಸಿನಿಮಾ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಇದಲ್ಲದೆ, ಶಿವಕಾರ್ತಿಕೇಯ ನಟನೆಯ 23ನೇ ಸಿನಿಮಾಗೂ ರುಕ್ಮಿಣಿ ನಾಯಕಿ ಆಗಿದ್ದಾರೆ. ಈ ಚಿತ್ರಕ್ಕೆ ಎಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆಗೆ ಹಲವು ಸಿನಿಮಾ ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ. ಎಲ್ಲವನ್ನೂ ಅಳೆದು ತೂಗಿ ಅವರು ಒಪ್ಪಿಕೊಳ್ಳುತ್ತಿದ್ದಾರೆ.
ವಿಜಯ್ ದೇವರಕೊಂಡ ನಟನೆಯ ಹೊಸ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ ಆಗಲಿದ್ದಾರೆ ಎಂದು ಸುದ್ದಿ ಹರಡಿತ್ತು. ಈ ವಿಚಾರಕ್ಕೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿತ್ತು. ‘ನಾನು ವಿಜಯ್ ಜೊತೆ ಸಿನಿಮಾ ಮಾಡುತ್ತಿಲ್ಲ. ಅದು ಕೇವಲ ವದಂತಿ’ ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್-ಬಿನಲ್ಲಿ ಈ ದೃಶ್ಯಗಳ ಗಮನಿಸಿದಿರಾ?
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಹೇಮಂತ್ ರಾವ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಎರಡು ಭಾಗಗಳಲ್ಲಿ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಚಿತ್ರ ಸದ್ಯ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ