ಹುಟ್ಟುಹಬ್ಬ ಆಚರಣೆಗೆ ಬಂದ ಅಭಿಮಾನಿಗಳ ಜೊತೆಗೆ ಟ್ರಾಕ್ಟರ್ ಓಡಿಸಿದ ದರ್ಶನ್

|

Updated on: Feb 15, 2024 | 10:14 PM

Darshan Birthday: ನಟ ದರ್ಶನ್ ಫೆಬ್ರವರಿ 16 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು ಈಗಾಗಲೇ ದರ್ಶನ್ ಮನೆಯ ಮುಂದೆ ಅಭಿಮಾನಿಗಳು ನೆರೆದಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರೆಗೆ ದರ್ಶನ್ ಟ್ರ್ಯಾಕ್ಟರ್ ಓಡಿಸಿದರು. ಇಲ್ಲಿದೆ ವಿಡಿಯೋ.

ಫೆಬ್ರವರಿ 16 ದರ್ಶನ್ (Darshan) ಹುಟ್ಟುಹಬ್ಬ, ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹಬ್ಬದಂತೆ ಆಚರಿಸುತ್ತಾರೆ ಅವರ ಅಭಿಮಾನಿಗಳು. ದರ್ಶನ್ ಹುಟ್ಟುಹಬ್ಬಕ್ಕೆ ಕಳೆದ ಕೆಲ ದಿನಗಳಿಂದಲೂ ಅಭಿಮಾನಿಗಳು ತಯಾರಿ ನಡೆಸಿದ್ದರು. ಫೆಬ್ರವರಿ 15ರಂದೇ ದರ್ಶನ್ ಮನೆಯ ಮುಂದೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. ದೂರ-ದೂರದ ಊರುಗಳಿಂದ ಅಭಿಮಾನಿಗಳು ಆಗಮಿಸಿದ್ದಾರೆ. ರೈತ ಸಂಘದವರು ಸೇರಿದಂತೆ ಇನ್ನೂ ಹಲವರು ದರ್ಶನ್ ಹುಟ್ಟುಹಬ್ಬಕ್ಕೆಂದು ಆಗಮಿಸಿರುವುದು ವಿಶೇಷ. ಅಭಿಮಾನಿಗಳ ಒತ್ತಾಯದ ಮೇರೆಗೆ ದರ್ಶನ್ ಅಭಿಮಾನಿಗಳು ತಂದಿದ್ದ ಟ್ರ್ಯಾಕ್ಟರ್ ಅನ್ನು ದರ್ಶನ್ ಓಡಿಸಿದರು. ದರ್ಶನ್ ಅವರು ಹಸಿರು ಶಾಲು ಹೆಗಲ ಮೇಲೆ ಹಾಕಿಕೊಂಡು ಟ್ರ್ಯಾಕ್ಟರ್ ಓಡಿಸಿದರು. ದರ್ಶನ್ ಟ್ರ್ಯಾಕ್ಟರ್ ಏರುತ್ತಿದ್ದಂತೆ ಅಭಿಮಾನಿಗಳು ಖುಷಿಯಿಂದ ಘೋಷಣೆಗಳನ್ನು ಕೂಗಿದರು. ಇಲ್ಲಿದೆ ವಿಡಿಯೋ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ