‘ಒಂದು ಸರಳ ಪ್ರೇಮಕಥೆ’ ಸಿನಿಮಾ ಬಗ್ಗೆ ಚಿತ್ರತಂಡದ ತಮಾಷೆ ಮಾತು-ಕತೆ

‘ಒಂದು ಸರಳ ಪ್ರೇಮಕಥೆ’ ಸಿನಿಮಾ ಬಗ್ಗೆ ಚಿತ್ರತಂಡದ ತಮಾಷೆ ಮಾತು-ಕತೆ

ಮಂಜುನಾಥ ಸಿ.
|

Updated on: Feb 15, 2024 | 11:25 PM

Ondu Sarala Premakathe: ಸಿಂಪಲ್ ಸುನಿ ನಿರ್ದೇಶನ ಮಾಡಿ, ವಿನಯ್ ರಾಜ್​ಕುಮಾರ್ ನಟಿಸಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ತಂಡ ನೀಡಿರುವ ವಿಶೇಷ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಇಲ್ಲಿದೆ ವಿಡಿಯೋ...

ಸಿಂಪಲ್ ಸುನಿ (Simple Suni) ನಿರ್ದೇಶಿಸಿ, ವಿನಯ್ ರಾಜ್​ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು ಪ್ರೇಕ್ಷಕರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಆದ ದಿನ ಅಷ್ಟೇನೂ ಒಳ್ಳೆಯ ಓಪನಿಂಗ್ ಸಿಕ್ಕಿರಲಿಲ್ಲ, ಆದರೆ ವಾರಾಂತ್ಯದಲ್ಲಿ ಜನ ಚಿತ್ರಮಂದಿರಕ್ಕೆ ಬಂದಿದ್ದು, ಅದೇ ಜನ ಮುಂದಿನ ದಿನಗಳಲ್ಲಿಯೂ ಮುಂದುವರೆದಿದ್ದಾರೆ. ಇದೀಗ ಸಿನಿಮಾದ ನಿರ್ದೇಶಕ ಸಿಂಪಲ್ ಸುನಿ, ವಿನಯ್ ರಾಜಕುಮಾರ್ ಮತ್ತು ನಟಿ ಸ್ವಾತಿಷ್ಟ ಅವರುಗಳು ಟಿವಿ9 ಗೆ ವಿಶೇಷ ಸಂದರ್ಶನ ನೀಡಿದ್ದು, ಸಿನಿಮಾ ಬಗ್ಗೆ, ಚಿತ್ರೀಕರಣ ನಡೆದಾಗ ಆದ ತಮಾಷೆಯ ಘಟನೆಗಳು, ಸಿನಿಮಾಕ್ಕೆ ದೊರಕುತ್ತಿರುವ ಪ್ರತಿಕ್ರಿಯೆಗಳು ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಕರಿಮಣಿ ಮಾಲೀಕ ಯಾರು ಹಾಡಿಗೆ ರೀಲ್ಸ್ ಸಹ ಮಾಡಿದ್ದಾರೆ. ಇಲ್ಲಿದೆ ವಿಡಿಯೋ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ