ಕಾಟೇರ ಪಾರ್ಟಿ ಕೇಸ್; ವಿಚಾರಣೆ ಎದುರಿಸಲು ಪೊಲೀಸ್ ಠಾಣೆಗೆ ಬಂದ ದರ್ಶನ್
ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ಬಂದು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ಅವರ ಆಗಮನದ ಸುದ್ದಿ ತಿಳಿದು ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಟೇಷನ್ ಮುಂದೆ ಜಮಾಯಿಸಿದ್ದಾರೆ. ದರ್ಶನ್ ಬಂದ ಕೂಡಲೇ ಅಭಿಮಾನಿಗಳು ಜೈಕಾರ ಹಾಕಿದ್ದಾರೆ.
ನಟ ದರ್ಶನ್ ಅವರು ಸುಬ್ರಹ್ಮಣ್ಯ ನಗರ ಪೊಲೀಸ್ (Subramanya Nagar Police) ಠಾಣೆಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪಬ್ವೊಂದರಲ್ಲಿ ಮಧ್ಯ ರಾತ್ರಿಯ ನಂತರ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು. ಹಾಗಾಗಿ ಪೊಲೀಸ್ ಠಾಣೆಗೆ ಬಂದು ದರ್ಶನ್ (Darshan) ಅವರು ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ಅವರ ಆಗಮನದ ಸುದ್ದಿ ತಿಳಿದು ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಟೇಷನ್ ಮುಂದೆ ಜಮಾಯಿಸಿದ್ದಾರೆ. ದರ್ಶನ್ ಬಂದ ಕೂಡಲೇ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ‘ಕಾಟೇರ’ ಸಿನಿಮಾ (Kaatera Movie) ಸೂಪರ್ ಹಿಟ್ ಆಗಿದೆ. ಆದರ ಖುಷಿಯಲ್ಲಿ ಅನೇಕ ಸೆಲೆಬ್ರಿಟಿಗಳ ಜೊತೆಗೂಡಿ ದರ್ಶನ್ ಅವರು ಪಾರ್ಟಿ ಮಾಡಿದ್ದರು. ನಿಯಮ ಉಲ್ಲಂಘಿಸಿ ಬೆಳಗಿನ ಜಾವದ ತನಕ ಪಬ್ನಲ್ಲಿ ಪಾರ್ಟಿ ಮಾಡಿರುವುದು ವಿವಾದಕ್ಕೆ ಕಾರಣ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಇಂದು ಸೂರ್ಯಗ್ರಹಣ ಶನಿ ಪತ ಬದಲಾವಣೆ ಹೇಗೆ?

Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್
