ದರ್ಶನ್ ನೋಡಲು ಜೈಲಿಗೆ ಬಂದು, ಮಾಧ್ಯಮದ ಕ್ಯಾಮೆರಾ ಕಂಡು ವಾಪಸ್​ ಹೋದ ವಿಜಯಲಕ್ಷ್ಮಿ

| Updated By: ಮದನ್​ ಕುಮಾರ್​

Updated on: Jun 24, 2024 | 1:05 PM

ನ್ಯಾಯಾಂಗ ಬಂಧನದಲ್ಲಿ ಇರುವ ನಟ ದರ್ಶನ್​ ಅವರನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಆಪ್ತರು ಬರುತ್ತಿದ್ದಾರೆ. ಇಂದು (ಜೂನ್​ 23) ದರ್ಶನ್​ ಪತ್ನಿ ವಿಜಯಲಕ್ಷ್ಮಿ ಅವರು ಜೈಲಿನ ಬಳಿ ಬಂದಿದ್ದರು. ಆದರೆ ಮಾಧ್ಯಮಗಳ ಕ್ಯಾಮೆರಾ ಕಂಡ ತಕ್ಷಣ ಅವರು ವಾಪಸ್​ ಹೋಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ದರ್ಶನ್​ ಅವರಿಗೆ ಸಂಕಷ್ಟ ಹೆಚ್ಚಾಗಿದೆ.

ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್​ (Darshan) ಅವರನ್ನು ನೋಡಲು ಆಪ್ತರು ಮತ್ತು ಕುಟುಂಬದವರು ಬರುತ್ತಿದ್ದಾರೆ. ದರ್ಶನ್​ ಪತ್ನಿ ವಿಜಯಲಕ್ಷ್ಮಿ (Darshan wife Vijayalakshmi) ಹಾಗೂ ಪುತ್ರ ವಿನೀಶ್​ ಅವರು ಇಂದು (ಜೂನ್​ 23) ಜೈಲಿನ ಬಳಿ ಬಂದಿದ್ದರು. ಆದರೆ ಜೈಲಿನ ಮುಂಭಾಗದಲ್ಲಿ ಮಾಧ್ಯಮಗಳ ಕ್ಯಾಮೆರಾಗಳನ್ನು ನೋಡಿದ ಕೂಡಲೇ ಅವರು ವಾಪಸ್​ ತೆರಳಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯ ಭೀಕರ ಕೊಲೆ ಪ್ರಕರಣದಲ್ಲಿ ದರ್ಶನ್​ ಎ2 ಆಗಿದ್ದು, ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗುತ್ತಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ತೀವ್ರವಾದಂತೆಲ್ಲ ಅನೇಕ ಶಾಕಿಂಗ್​ ವಿಚಾರಗಳು ಹೊರಬರುತ್ತಿವೆ. ಈ ಕೇಸ್​ನಲ್ಲಿ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ ಎ1 ಆಗಿದ್ದಾರೆ. ಇನ್ನುಳಿದ ಸಹಚರರು ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.