ದರ್ಶನ್ರನ್ನು ಭೇಟಿಯಾಗಲು ಕೇಂದ್ರ ಕಾರಾಗೃಹಕ್ಕೆ ಬಂದ ಬಾಲ್ಯದ ಗೆಳೆಯ ಶಿವಕುಮಾರ್
ದರ್ಶನ್ ಜೈಲಲ್ಲೂ ಸಿನಿಮಾ ಇಂಡಸ್ಟ್ರಿ ಬಗ್ಗೆ ಮಾತಾಡಿದರು, ಹೇಗೆ ನಡೆಯುತ್ತಿದೆ, ಯಾವ ಸಿನಿಮಾ ಬಿಡುಗಡೆಯಾಗಿದೆ ಅಂತೆಲ್ಲ ಕೇಳಿದರು ಅಂತ ಶಿವಕುಮಾರ್ ಹೇಳಿದರು. ತನ್ನ ನಿರ್ಮಾಣದ ಸಿನಿಮಾ ಯಾವತ್ತೋ ರಿಲೀಸ್ ಆಗಿದೆ ಮತ್ತು ತನ್ನದ್ಯಾವುದೂ ಹೊಸ ಪ್ರಾಜೆಕ್ಟ್ ಇಲ್ಲ ಎಂದು ಶಿವಕುಮಾರ್ ಹೇಳಿದರು.
ಆನೇಕಲ್ (ಬೆಂಗಳೂರು): ಇವರು ಶಿವಕುಮಾರ್ ಅಂತ. ಚಿತ್ರ ನಿರ್ಮಾಕರಾಗಿರುವ ಜೊತೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಸೆಂಟ್ರಲ್ ಜೈಲಿನಲ್ಲಿರುವ ಚಿತ್ರನಟ ದರ್ಶನ್ ಅವರ ಚೆಡ್ಡೀ ದೋಸ್ತ್ ಕೂಡ ಹೌದು. ಇಂದು ಶಿವಕುಮಾರ್ ತಮ್ಮ ಗೆಳೆಯನನ್ನು ಕಂಡು ಮಾತಾಡಲು ಸೆಂಟ್ರಲ್ ಜೈಲಿಗೆ ಬಂದಿದ್ದರು. ಆಚೆ ಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಜೈಲಲ್ಲಿ ದರ್ಶನ್ ಬೇಜಾರಲ್ಲಿದ್ದಾರೆ ಇದ್ದಾರೆ, ಮಾಡಿರುವ ಕೆಲಸಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರು. ದರ್ಶನ್ ರನ್ನು ಬಾಲ್ಯದಿಂದ ಬಲ್ಲ ಶಿವಕುಮಾರ್, ಗೆಳೆಯನಿಗೆ ಕೊಂಚ ಕೋಪ ಜಾಸ್ತಿ ಆದರೆ ಈ ಕೋಪ ಈ ಮಟ್ಟಕ್ಕೆ ಹೋಗುತ್ತೆ ಅಂತ ಅನ್ಕೊಂಡಿರಲಿಲ್ಲ ಎಂದರು. ಅಂದರೆ ಕೊಲೆ ಮಾಡುವ ಮಟ್ಟಕ್ಕಾ ಅಂತ ಕೇಳಿದರೆ ತಮ್ಮ ಮಾತನ್ನು ತಿದ್ದಿಕೊಳ್ಳುವ ಅವರು, ವಿಷಯ ಕೋರ್ಟ್ ನಲ್ಲಿರುವುದರಿಂದ ಅದರ ಬಗ್ಗೆ ಮಾತಾಡೋದು ಸರಿಯಲ್ಲ ಎಂದು ಹೇಳಿ ವಿಚಾರಣೆ ಮುಗಿದ ಮೇಲೆ ಸತ್ಯಾಂಶ ಹೊರಬೀಳಲಿದೆ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ಗಾಗಿ ಬಟ್ಟೆ ಹೊತ್ತು ತಂದ ಅಕ್ಕನ ಮಗ, ಜೈಲಲ್ಲಿ ನಟನ ತೂಕ ಕಮ್ಮಿಯಾಗುತ್ತಿದೆ!