ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ದಸರಾ ಆನೆ ಗೋಪಾಲಸ್ವಾಮಿ ಸಾವು
ದಸರಾ ಗಜಪಡೆಯ ಆಕರ್ಷಣೀಯ ಕೇಂದ್ರಬಿಂದುಗಳಲ್ಲಿ ಒಂದಾಗಿದ್ದ ಶಾಂತಸ್ವಾಭಾವದ ಗೋಪಾಲಸ್ವಾಮಿ ಆನೆ ಕಾಡಾನೆ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದೆ.
ಮೈಸೂರು: ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ದಸರಾ ಆನೆ ಗೋಪಾಲಸ್ವಾಮಿ(39) ಮೃತಪಟ್ಟಿದೆ. ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿ ಇಂದು(ನವೆಂಬರ್ 13) ಕೊನೆಯುಸಿರೆಳೆದಿದೆ.
ಕಾಡಾನೆ ಸೆರೆ, ಪಳಗಿಸುವ ತರಬೇತಿ ಪಡೆದಿದ್ದ 39 ವರ್ಷದ ಗೋಪಾಲಸ್ವಾಮಿ, ಇತ್ತೀಚೆಗೆ ಸೆರೆ ಹಿಡಿದಿದ್ದ ಆನೆ ಅಯ್ಯಪ್ಪ ಜತೆ ಕಾದಾಟದಲ್ಲಿ ಗಾಯಗೊಂಡಿತ್ತು. ಶಾಂತಸ್ವಾಭಾವದ ಆನೆಯಾಗಿದ್ದ ಗೋಪಾಲಸ್ವಾಮಿ, ಈ ವರೆಗೆ ಒಟ್ಟು 14 ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. ಈ ಬಾರಿಯ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು.
Published on: Nov 23, 2022 08:45 PM
Latest Videos