ತಾಯಿ ಶಾರದೆಯ ವಿಸರ್ಜನೆಯೊಂದಿಗೆ ಮಂಗಳೂರಲ್ಲಿ ದಸರಾ ಮಹೋತ್ಸವ ಸಂಪನ್ನ
ಮೈಸೂರಲ್ಲಿ ಉತ್ಸವ ಜಂಬೂ ಸವಾರಿ ಮತ್ತು ಟಾರ್ಚ್ ಲೈಟ್ ಪರೇಡ್ ಬಳಿಕ ಕೊನೆಗೊಂಡರೆ ಮಂಗಳೂರಲ್ಲಿ ತಾಯಿ ಶಾರದೆ ವಿಸರ್ಜನೆಯೊಂದಿಗೆ ಹಬ್ಬ ಪೂರ್ಣಗೊಳ್ಳುತ್ತದೆ. ದೃಶ್ಯದಲ್ಲಿ ಭಕ್ತರು ಶಾರದಾಮಾತೆಯ ಮೂರ್ತಿಯನ್ನು ಹೊಂಡವೊಂದರಲ್ಲಿ ವಿಸರ್ಜಿಸುತ್ತಿರುವುದನ್ನು ನೋಡಬಹುದು.
ಮಂಗಳೂರು: ನಾಡಹಬ್ಬ ದಸರಾ ನಾಡಿನಾದ್ಯಂತ ಸಂಭ್ರಮ, ಸಡಗರ ಮತ್ತು ವೈಭವೋಪೇತ ಆಚರಣೆಯೊಂದಿಗೆ ಸಂಪನ್ನಗೊಂಡಿದೆ. ದಸರೆಯನ್ನು ನಮ್ಮ ದೇಶದಲ್ಲಿ ನಾನಾರೀತಿಯಲ್ಲಿ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಕೊಲ್ಕತ್ತಾದಲ್ಲಿ-ದಸರಾ ಹಬ್ಬದ ಅಂಗವಾಗಿ ನಡೆಯುವ ದುರ್ಗಾಪೂಜೆ (Durga Pooja) ಮೈಸೂರಿನಲ್ಲಿ ನಡೆಯುವ ದಸರಾ ಅಚರಣೆಯಷ್ಟೇ ಖ್ಯಾತ. ಮೈಸೂರಲ್ಲಿ ಜಗದ್ವಿಖ್ಯಾತ ಜಂಬೂ ಸವಾರಿಯೊಂದಿಗೆ (Jumbo Savari) ನಿನ್ನೆ ದಸರಾ ಉತ್ಸವ ಸಂಪನ್ನಗೊಂಡಿತು. ಶಿವಮೊಗ್ಗದಲ್ಲೂ ಜಂಬೂಸವಾರಿ ನಡೆಯುತ್ತದೆ ಅಂತ ಬಹಳ ಜನರಿಗೆ ಗೊತ್ತಿರಲಾರದು. ಮಂಗಳೂರಲ್ಲಿ ದಸರಾ ಹಬ್ಬವನ್ನು ಸ್ವಲ್ಪ ಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲೂ ವೈಭವದ ದಸರಾ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು. ಮೈಸೂರಲ್ಲಿ ಉತ್ಸವ ಜಂಬೂ ಸವಾರಿ ಮತ್ತು ಟಾರ್ಚ್ ಲೈಟ್ ಪರೇಡ್ ಬಳಿಕ ಕೊನೆಗೊಂಡರೆ ಮಂಗಳೂರಲ್ಲಿ ತಾಯಿ ಶಾರದೆ (Sharada Matha) ವಿಸರ್ಜನೆಯೊಂದಿಗೆ ಹಬ್ಬ ಪೂರ್ಣಗೊಳ್ಳುತ್ತದೆ. ದೃಶ್ಯದಲ್ಲಿ ಭಕ್ತರು ಶಾರದಾಮಾತೆಯ ಮೂರ್ತಿಯನ್ನು ಹೊಂಡವೊಂದರಲ್ಲಿ ವಿಸರ್ಜಿಸುತ್ತಿರುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ