ಜೇಲರ್ ಚಿತ್ರದ ವಿಲನ್ ವಿನಾಯಕನ್ ಕುಡಿತದ ಅಮಲಿನಲ್ಲಿ ಮನೆ ಬಳಿಯೂ ವಿಲನ್ ವರ್ತನೆ, ಪೊಲೀಸರಿಂದ ಬುದ್ಧಿವಾದ!!

ಜೇಲರ್ ಚಿತ್ರದ ವಿಲನ್ ವಿನಾಯಕನ್ ಕುಡಿತದ ಅಮಲಿನಲ್ಲಿ ಮನೆ ಬಳಿಯೂ ವಿಲನ್ ವರ್ತನೆ, ಪೊಲೀಸರಿಂದ ಬುದ್ಧಿವಾದ!!

ಅರುಣ್​ ಕುಮಾರ್​ ಬೆಳ್ಳಿ
|

Updated on:Oct 25, 2023 | 10:56 AM

ಎರ್ನಾಕುಲಂ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುವಾಗಲೂ ಅವರಿಗೆ ಆವಾಜ್ ಹಾಕಿದ್ದಾರಂತೆ. ವಿನಾಯಕನ್ ಜಾಮೀನು ಮೇಲೆ ಬಿಡುಗಡೆ ಆಗಿರೋದು ನಿಜ, ಆದರೆ ಒಬ್ಬ ಸೆಲಿಬ್ರಿಟಿ ಹೀಗೆ ಕುಡಿದು ಸಾರ್ವಜನಿಕವಾಗಿ ಕೆಟ್ಟ ವರ್ತನೆ ಪ್ರದರ್ಶಿಸುವುದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡದು.

ಎರ್ನಾಕುಲಂ (ಕೇರಳ): ಮಲಯಾಳಂ ನಟ ವಿನಾಯಕನ್ (actor Vinayakan) ತಮಿಳು ಚಿತ್ರರಂಗದಲ್ಲೂ ದೊಡ್ಡ ಹೆಸರು. ರಜನೀಕಾಂತ್ (Rajinikanth) ಅಭಿನಯದ ಜೇಲರ್ (Jailer) ಚಿತ್ರದಲ್ಲಿ ಅವರು ಖಳನಾಯಕನ ಪಾತ್ರದಲ್ಲಿ ನೀಡಿದ ಅಭಿನಯ ಖ್ಯಾತಿಯ ಉತ್ತುಂಗಕ್ಕೇರಿಸಿರುವುದು ಸುಳ್ಳಲ್ಲ. ಆದರೆ ಖ್ಯಾತಿ ವಿನಾಯಕನ್ ತಲೆಗೂ ಏರಿದೆ ಮಾರಾಯ್ರೇ. ಹಾಗಾಗೇ, ಕಂಠಮಟ್ಟ ಕುಡಿದು ಅಮಲನ್ನು ತಲೆಗೇರಿಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಸೀನ್ ಗಳನ್ನು ಸೃಷ್ಟಿಮಾಡಿ ತನ್ನ ಹೆಸರಿಗೆ ಮಸಿ ಬಳಿದುಕೊಳ್ಳುತ್ತಿದ್ದಾರೆ. ಮಂಗಳವಾರ ರಾತ್ರಿ ವಿನಾಯಕನ್ ತನ್ನ ಫ್ಲ್ಯಾಟ್ ನಲ್ಲಿ ಮನಸೋ ಇಚ್ಛೆ ಕುಡಿದು ನೆರೆಹೊರೆಯವರೊಂದಿಗೆ ಜಗಳ ಮಾಡಿದ್ದಾರೆ. ರಸ್ತೆಯ ಮೇಲೂ ಗಲಾಟೆ ಮಾಡಿರುವರೆಂದು ಹೇಳಲಾಗಿದೆ. ಎರ್ನಾಕುಲಂ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುವಾಗಲೂ ಅವರಿಗೆ ಆವಾಜ್ ಹಾಕಿದ್ದಾರಂತೆ. ವಿನಾಯಕನ್ ಜಾಮೀನು ಮೇಲೆ ಬಿಡುಗಡೆ ಆಗಿರೋದು ನಿಜ, ಆದರೆ ಒಬ್ಬ ಸೆಲಿಬ್ರಿಟಿ ಹೀಗೆ ಕುಡಿದು ಸಾರ್ವಜನಿಕವಾಗಿ ಕೆಟ್ಟ ವರ್ತನೆ ಪ್ರದರ್ಶಿಸುವುದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 25, 2023 10:55 AM