‘ಜೈಲರ್’ ಸಿನಿಮಾ ವಿಲನ್​ಗೆ ಕೊಟ್ಟಿದ್ದು ಕೇವಲ ₹35 ಲಕ್ಷವೇ?

Vinayakan: 'ಜೈಲರ್' ಸಿನಿಮಾದ ಯಶಸ್ಸಿನಿಂದ ಥ್ರಿಲ್ ಆಗಿ ರಜನೀಕಾಂತ್, ನಿರ್ದೇಶಕ ನೆಲ್ಸನ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರುಗಳಿಗೆ ಕೋಟ್ಯಂತರ ಮೌಲ್ಯದ ಉಡುಗೊರೆ ಕೊಟ್ಟ ನಿರ್ಮಾಪಕ, ಅದೇ ಸಿನಿಮಾದ ವಿಲನ್ ವಿನಾಯಕನ್​ಗೆ ಕೇವಲ 35 ಲಕ್ಷ ರೂಪಾಯಿ ಸಂಭಾವನೆಯಷ್ಟನ್ನೇ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

'ಜೈಲರ್' ಸಿನಿಮಾ ವಿಲನ್​ಗೆ ಕೊಟ್ಟಿದ್ದು ಕೇವಲ ₹35 ಲಕ್ಷವೇ?
ವಿನಾಯಕನ್
Follow us
ಮಂಜುನಾಥ ಸಿ.
|

Updated on:Sep 19, 2023 | 9:48 PM

ರಜನೀಕಾಂತ್ (Rajinikanth) ನಟನೆಯ ‘ಜೈಲರ್‘ (Jailer) ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿದೆ. 600 ಕೋಟಿಗೂ ಹೆಚ್ಚು ಹಣವನ್ನು ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ಗಳಿಸಿಕೊಂಡಿದೆ. ಆಡಿಯೋ ಹಕ್ಕು, ಒಟಿಟಿ, ಸ್ಯಾಟಲೈಟ್ ಹಕ್ಕು ಇನ್ನಿತರೆಗಳನ್ನು ಸೇರಿಸಿದರೆ ಸಿನಿಮಾದ ಗಳಿಕೆ 1000 ಕೋಟಿ ದಾಟಿದೆ. ಸಿನಿಮಾದ ಯಶಸ್ಸಿನಿಂದ ಥ್ರಿಲ್ ಆಗಿರುವ ನಿರ್ಮಾಪಕ ಕಲಾನಿಧಿಮಾರನ್, ಸಿನಿಮಾದ ನಾಯಕ ರಜನೀಕಾಂತ್, ನಿರ್ದೇಶಕ ನೆಲ್ಸನ್, ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದ್ರನ್ ಅವರಿಗೆ ದೊಡ್ಡ ಮೊತ್ತದ ಹಣ ನೀಡುವ ಜೊತೆಗೆ (ಸಂಭಾವನೆ ಹೊರತಾಗಿ) ಭಾರಿ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ‘ಜೈಲರ್’ ಸಿನಿಮಾನಲ್ಲಿ ವಿಲನ್ ಪಾತ್ರ ಮಾಡಿ ಬಹುವಾಗಿ ಗಮನ ಸೆಳೆದಿರುವ ಮಲಯಾಳಂ ನಟ ವಿನಾಯಕನ್​ಗೆ ಅತ್ಯಂತ ಕಡಿಮೆ ಸಂಭಾವನೆ ನಿಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಸ್ವತಃ ವಿನಾಯಗನ್ ಮಾತನಾಡಿದ್ದಾರೆ.

‘ಜೈಲರ್’ ಸಿನಿಮಾನಲ್ಲಿ ವಿಲನ್ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿರುವ ವಿನಾಯಕನ್​ಗೆ ಕೇವಲ 35 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿನಾಯಕನ್, ”ನಿರ್ಮಾಪಕರು ಈ ಸುದ್ದಿ ಕೇಳದಿದ್ದರೆ ಸಾಕು, 35 ಲಕ್ಷವಲ್ಲ ಅದಕ್ಕೆ ಮೂರು ಪಟ್ಟಿಗಿಂತಲೂ ಹೆಚ್ಚಿನ ಹಣವನ್ನು ಅವರು ನನಗೆ ನೀಡಿದ್ದಾರೆ. ಈ ಸುಳ್ಳು ಸುದ್ದಿಗಳನ್ನು ಕೆಲವು ತರ್ಲೆಗಳು ಹರಿಬಿಟ್ಟಿದ್ದಾರೆ ಎನಿಸುತ್ತದೆ. ನಾನು ಏನು ಕೇಳಿದ್ದೆನೊ ಅಷ್ಟು ಹಣವನ್ನು ನಿರ್ಮಾಪಕರು ನನಗೆ ಕೊಟ್ಟಿದ್ದಾರೆ. ಅಲ್ಲದೆ ಸೆಟ್​ನಲ್ಲಿ ಸಹ ನನಗೆ ರಾಯಲ್ ಟ್ರೀಟ್​ಮೆಂಟ್ ನೀಡಿದ್ದಾರೆ” ಎಂದಿದ್ದಾರೆ.

ಇದನ್ನೂ ಓದಿ:‘ಜೈಲರ್’ ಗೆದ್ದ ಖುಷಿಯಲ್ಲಿ ರಜನಿಗೆ 100 ಕೋಟಿ ರೂ. ಚೆಕ್ ಕೊಟ್ಟ ಕಲಾನಿಧಿ ಮಾರನ್; ಒಟ್ಟೂ ಸಂಭಾವನೆ ಎಷ್ಟು?

”ನಾನು ಇಷ್ಟು ಹೆಚ್ಚಿನ ದಿನಗಳನ್ನು ಇನ್ಯಾವುದೇ ಪ್ರಾಜೆಕ್ಟ್​ಗೆ ಮೀಸಲಾಗಿಟ್ಟಿರಲಿಲ್ಲ. ‘ಜೈಲರ್’ ನನ್ನ ಪಾಲಿಗೆ ಬಹಳ ದೊಡ್ಡ ಅವಕಾಶ. ಅವಕಾಶ ನೀಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ‘ಜೈಲರ್’ ಸಿನಿಮಾದಲ್ಲಿ ಪಾತ್ರದ ಕಾರಣದಿಂದ ನಾನು ಧನುಶ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದ ಅವಕಾಶ ಕಳೆದುಕೊಳ್ಳಬೇಕಾಯ್ತು. ಆದರೆ ಅದೆಲ್ಲ ನಮ್ಮ ಕೈಯಲ್ಲಿ ಇರುವುದಿಲ್ಲ” ಎಂದಿದ್ದಾರೆ ವಿನಾಯಕನ್.

ವಿನಾಯಕನ್, ಮಲಯಾಳಂ ಮೂಲದವರು. ಡ್ಯಾನ್ಸರ್ ಆಗಿ ವೃತ್ತಿ ಆರಂಭಿಸಿದ ವಿನಾಯಕನ್, ಬಹಳ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಈಗ ಈ ಹಂತಕ್ಕೆ ಏರಿದ್ದಾರೆ. ಮಲಯಾಳಂನ ‘ಕಮ್ಮಾಟಿಪದಂ’ ಸಿನಿಮಾದ ಅವರ ನಟನೆಗೆ ಫಿದಾ ಆಗದವರು ಕಡಿಮೆ. ಆ ಸಿನಿಮಾಕ್ಕೆ ಅವರಿಗೆ ರಾಷ್ಟ್ರಪ್ರಶಸ್ತಿಯನ್ನು ನಿರೀಕ್ಷಿಸಲಾಗಿತ್ತು ಆದರೆ ರಾಷ್ಟ್ರಪ್ರಶಸ್ತಿ ಅವರ ಕೈತಪ್ಪಿತ್ತು. ಆದರೆ ಫಿಲಂಫೇರ್, ಕೇರಳ ಸ್ಟೇಟ್ ಅವಾರ್ಡ್​ಗಳು ಅವರಿಗೆ ಧಕ್ಕಿದೆ. 2006ರಲ್ಲಿ ‘ತಿಮಿರು’ ಸಿನಿಮಾದ ಬಹಳ ಸಣ್ಣ ಪಾತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದ ವಿನಾಯಕನ್ ಈಗ ದೊಡ್ಡ ಸೂಪರ್ ಸ್ಟಾರ್ ರಜನೀಕಾಂತ್​ಗೆ ವಿಲನ್ ಆಗುವ ಹಂತಕ್ಕೆ ಬೆಳೆದು ನಿಂತಿದ್ದಾರೆ. ಒಳ್ಳೆಯ ಸಂಗೀತಗಾರರೂ ಆಗಿರುವ ವಿನಾಯಕನ್, ಕೆಲವು ಮಲಯಾಳಂ ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:45 pm, Tue, 19 September 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು