AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್’ ಸಿನಿಮಾ ಗೆಲುವಿನ ಬೆನ್ನಲ್ಲೇ ಹೊಸ ಸಿನಿಮಾ ರಿಲೀಸ್ ದಿನಾಂಕ ಘೋಷಿಸಿದ ಮೋಹನ್​ಲಾಲ್

‘ಜೈಲರ್’ ಸಿನಿಮಾದಲ್ಲಿ ಮೋಹನ್​ಲಾಲ್ ಅವರು ಮ್ಯಾಥೀವ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಅತಿಥಿ ಪಾತ್ರ ಆದರೂ ಅದಕ್ಕೆ ಸಾಕಷ್ಟು ತೂಕ ಇತ್ತು. ಈಗ ‘ಮಲೈ ಕೋಟ್ಟ ವಾಲಿಬನ್’ ಚಿತ್ರದ ಮೂಲಕ ಅವರು ಗಮನ ಸೆಳೆಯಲು ಮುಂದಾಗಿದ್ದಾರೆ.

‘ಜೈಲರ್’ ಸಿನಿಮಾ ಗೆಲುವಿನ ಬೆನ್ನಲ್ಲೇ ಹೊಸ ಸಿನಿಮಾ ರಿಲೀಸ್ ದಿನಾಂಕ ಘೋಷಿಸಿದ ಮೋಹನ್​ಲಾಲ್
ಮೋಹನ್​ಲಾಲ್
Follow us
ರಾಜೇಶ್ ದುಗ್ಗುಮನೆ
|

Updated on: Sep 19, 2023 | 11:29 AM

ಮೋಹನ್​ಲಾಲ್ ಅವರು ‘ಜೈಲರ್’ ಸಿನಿಮಾದಲ್ಲಿ (Jailer Movie) ಅತಿಥಿಪಾತ್ರ ಮಾಡಿದ್ದರು. ಸಿನಿಮಾ ಗೆಲುವಿನಲ್ಲಿ ಅವರ ಪಾತ್ರವೂ ಇದೆ. ಈಗ ಅವರ ನಟನೆಯ ಹೊಸ ಸಿನಿಮಾ ‘ಮಲೈ ಕೋಟ್ಟ ವಾಲಿಬನ್’ (Malaikottai Vaaliban) ರಿಲೀಸ್ ದಿನಾಂಕ ಘೋಷಣೆ ಆಗಿದೆ. ಗಣರಾಜ್ಯೋತ್ಸವದ ಪ್ರಯುಕ್ತ 2024ರ ಜನವರಿ 25ರಂದು ಸಿನಿಮಾ ರಿಲೀಸ್ ಆಗಲಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್​ಗಾಗಿ ಅಭಿಮಾನಿಗಳು ಕಾದಿದ್ದಾರೆ.

‘ಮಲೈ ಕೋಟ್ಟ ವಾಲಿಬನ್’ ಸಿನಿಮಾ 2022ರಲ್ಲೇ ಘೋಷಣೆ ಆಯಿತು. ಈ ಚಿತ್ರದ ಶೂಟಿಂಗ್ ವಿಳಂಬ ಆಗಿದೆ. ಆದರೆ, ಸಿನಿಮಾ ಬಗ್ಗೆ ಇರುವ ನಿರೀಕ್ಷೆ ಕಡಿಮೆ ಆಗಿಲ್ಲ. ಈಗ ಗಣೇಶ ಚತುರ್ಥಿ ಸಂದರ್ಭದಲ್ಲಿ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ಅಪ್​ಡೇಟ್ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮೋಹನ್​ಲಾಲ್ ಬರೆದುಕೊಂಡಿದ್ದಾರೆ. ‘ಕೌಂಟ್​ಡೌನ್ ಶುರುವಾಗಿದೆ. ವಾಲಿಬನ್ ಸಿನಿಮಾ ಜನವರಿ 25, 2024ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ’ ಎಂದು ಮೋಹನ್​ಲಾಲ್ ಬರೆದುಕೊಂಡಿದ್ದಾರೆ.

‘ಮಲೈ ಕೋಟ್ಟ ವಾಲಿಬನ್’ ಚಿತ್ರವನ್ನು ಲಿಜೋ ಜೊಸೆ ಪೆಲ್ಲಿಸೆರ್ರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಕೂಡ ಗಮನ ಸೆಳೆದಿದೆ. ಮೋಹನ್​ಲಾಲ್ ಅವರು ಹೊಸ ರೀತಿಯ ಗೆಟಪ್​ನಲ್ಲಿ ಆಗಮಿಸಿದ್ದಾರೆ. ಅವರ ಹಿಂಭಾಗದಲ್ಲಿ ಮರಳುಗಾಡಿದೆ. ಇದು ಗಮನ ಸೆಳೆಯುತ್ತಿದೆ. ನಿರ್ದೇಶಕರ ಕೆಲಸವನ್ನು ಮೋಹನ್​ಲಾಲ್ ಹೊಗಳಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಮೋಹನ್​ಲಾಲ್ ಸಾಹಸ: ನಂದ ಕಿಶೋರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ

‘ಜೈಲರ್’ ಸಿನಿಮಾದಲ್ಲಿ ಮೋಹನ್​ಲಾಲ್ ಅವರು ಮ್ಯಾಥೀವ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಅತಿಥಿ ಪಾತ್ರ ಆದರೂ ಅದಕ್ಕೆ ಸಾಕಷ್ಟು ತೂಕ ಇತ್ತು. ಈಗ ‘ಮಲೈ ಕೋಟ್ಟ ವಾಲಿಬನ್’ ಚಿತ್ರದ ಮೂಲಕ ಅವರು ಗಮನ ಸೆಳೆಯಲು ಮುಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ