ನೋಡಿಕೊಳ್ಳಲು ಯಾರೂ ಇಲ್ಲದೇ 400 ಕೋಟಿ ರೂಪಾಯಿಗೆ ಮಾರಾಟ ಆಯ್ತು ಬಾಲಿವುಡ್​ ನಟನ ಬಂಗಲೆ

ಈ ಬಂಗಲೆಯಲ್ಲಿ ದೇವ್​ ಆನಂದ್​ ಅವರು ಅಂದಾಜು 40 ವರ್ಷ ವಾಸವಾಗಿದ್ದರು. ಈಗ ಈ ಪ್ರಾಪರ್ಟಿಯನ್ನು ನೋಡಿಕೊಳ್ಳಲು ಮುಂಬೈನಲ್ಲಿ ಯಾರೂ ಇಲ್ಲ. ಹಾಗಾಗಿ ಇದನ್ನು ಮಾರಬೇಕು ಎಂಬ ನಿರ್ಧಾರ ಈ ಮೊದಲೇ ಮಾಡಲಾಗಿತ್ತು. ಇತ್ತೀಚೆಗೆ ಇದರ ವ್ಯವಹಾರ ಫೈನಲ್​ ಆಗಿದೆ. ನೂರಾರು ಕೋಟಿ ರೂಪಾಯಿಗೆ ಈ ಬಂಗಲೆ ಮಾರಾಟ ಆಗಿದೆ.

ನೋಡಿಕೊಳ್ಳಲು ಯಾರೂ ಇಲ್ಲದೇ 400 ಕೋಟಿ ರೂಪಾಯಿಗೆ ಮಾರಾಟ ಆಯ್ತು ಬಾಲಿವುಡ್​ ನಟನ ಬಂಗಲೆ
ದೇವ್​ ಆನಂದ್​
Follow us
|

Updated on: Sep 19, 2023 | 8:04 PM

ಹಿಂದಿ ಚಿತ್ರರಂಗದಲ್ಲಿ (Bollywood) ನಟ ದೇವ್​ ಆನಂದ್​ ಮಾಡಿದ ಸಾಧನೆ ಬಹಳ ದೊಡ್ಡದು. ಸ್ಟಾರ್​ ಹೀರೋ ಆಗಿ ಮೆರೆದ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು. ಅವರ ಸಿನಿಮಾದ ಹಾಡುಗಳು ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ. ಕೈ ತುಂಬ ಸಂಭಾವನೆ ಪಡೆಯುತ್ತಿದ್ದ ದೇವ್​ ಆನಂದ್​ (Dev Anand) ಅವರು ಅನೇಕ ಕಡೆಗಳಲ್ಲಿ ಆಸ್ತಿ ಮಾಡಿದ್ದರು. ಮುಂಬೈನಲ್ಲಿ ಬಹುಕೋಟಿ ರೂಪಾಯಿ ಬೆಲೆ ಬಾಳುವ ಪ್ರಾಪರ್ಟಿ ಹೊಂದಿದ್ದರು. 2011ರಲ್ಲಿ ಅವರು ನಿಧನರಾದರು. ಈಗ ಆ ಆಸ್ತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಮಕ್ಕಳು ಮುಂಬೈ ಬಿಟ್ಟು ಬೇರೆ ಕಡೆಗಳಲ್ಲಿ ನೆಲೆಸಿದ್ದಾರೆ. ಆ ಕಾರಣದಿಂದ ದೇವ್​ ಆನಂದ್​ ಒಡೆತನದ ಬಂಗಲೆಯೊಂದನ್ನು (Dev Anand Bungalow) ಮಾರಾಟ ಮಾಡಲಾಗಿದೆ. ಬರೋಬ್ಬರಿ 400 ಕೋಟಿ ರೂಪಾಯಿಗೆ ಇದು ಸೇಲ್​ ಆಗಿದೆ ಎಂದು ವರದಿ ಪ್ರಕಟ ಆಗಿದೆ.

ಮುಂಬೈನ ಅನೇಕ ಸೆಲೆಬ್ರಿಟಿಗಳು ಜುಹೂ ಪ್ರದೇಶದಲ್ಲಿ ಮನೆ ಹೊಂದಿದ್ದಾರೆ. ಶ್ರೀಮಂತರ ಏರಿಯಾ ಎಂದೇ ಫೇಮಸ್​ ಆಗಿರುವ ಈ ಜಾಗದಲ್ಲಿ ದೇವ್​ ಆನಂದ್​ ಅವರ ಬಂಗಲೆ ಇದೆ. ಇದನ್ನು ಒಂದು ರಿಯಲ್​ ಎಸ್ಟೇಟ್​ ಕಂಪನಿಯು ಖರೀದಿಸಿದೆ. ಬಂಗಲೆಯನ್ನು ನೆಲಸಮ ಮಾಡಿ, ಅಲ್ಲಿ 22 ಮಹಡಿಯ ಕಟ್ಟಡವನ್ನು ನಿರ್ಮಿಸಲು ಪ್ಲ್ಯಾನ್​ ಸಿದ್ಧವಾಗಿದೆ ಎಂಬ ಮಾತು ಕೇಳಿಬಂದಿದೆ. 350ರಿಂದ 400 ಕೋಟಿ ರೂಪಾಯಿಗೆ ಈ ವ್ಯವಹಾರ ಕುದುರಿದೆ. ಕೆಲವು ಸಮಯದ ತನಕ ಈ ಬಂಗಲೆಯ ಅಕ್ಕಪಕ್ಕ ಮಾಧುರಿ ದೀಕ್ಷಿತ್​, ಡಿಂಪಲ್​ ಕಪಾಡಿಯಾ ಮುಂತಾದ ಸೆಲೆಬ್ರಿಟಿಗಳು ವಾಸಿಸುತ್ತಿದ್ದರು.

ಇದನ್ನೂ ಓದಿ: 32 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ನಟಿ ಸೋನಂ ಕಪೂರ್​

ಈ ಬಂಗಲೆಯಲ್ಲಿ ದೇವ್​ ಆನಂದ್​ ಅವರು ಅಂದಾಜು 40 ವರ್ಷ ವಾಸವಾಗಿದ್ದರು. ಅವರ ಮಗ ಸುನೀಲ್ ಈಗ ಅಮೆರಿಕದಲ್ಲಿ ವಾಸವಾಗಿದ್ದಾರೆ. ಮಗಳು ದೇವಿನಾ ಅವರು ಊಟಿಯಲ್ಲಿ ಸೆಟ್ಲ್​ ಆಗಿದ್ದಾರೆ. ಆದ್ದರಿಂದ ಮುಂಬೈನಲ್ಲಿ ಇರುವ ಈ ಪ್ರಾಪರ್ಟಿಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಾಗಾಗಿ ಇದನ್ನು ಮಾರಬೇಕು ಎಂಬ ನಿರ್ಧಾರ ಈ ಮೊದಲೇ ಮಾಡಲಾಗಿತ್ತು. ಈಗ ವ್ಯವಹಾರ ಫೈನಲ್​ ಆಗಿದೆ. ಇದಲ್ಲದೇ ಪನ್ವೇಲ್​ನಲ್ಲಿ ಇರುವ ಆಸ್ತಿಯನ್ನು ಕೂಡ ಇದೇ ಕಾರಣಕ್ಕೆ ಮಾರಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಇದನ್ನೂ ಓದಿ: 44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?

ಜುಹೂ ಏರಿಯಾದ ಬಗ್ಗೆ ದೇವ್​ ಆನಂದ್​ ಅವರು ಬಹಳ ಪ್ರೀತಿ ಹೊಂದಿದ್ದರು. ಯಾಕೆಂದರೆ 1950ರ ಸಮಯದಲ್ಲಿ ಆ ಪ್ರದೇಶ ನಿರ್ಜನವಾಗಿತ್ತು. ಅಲ್ಲಿನ ನಿಸರ್ಗದ ಸೌಂದರ್ಯಕ್ಕೆ ದೇವ್​ ಆನಂದ್​ ಮಾರುಹೋಗಿದ್ದರು. ಹಾಗಾಗಿ ಅಲ್ಲಿ ಮನೆ ಕಟ್ಟಲು ನಿರ್ಧರಿಸಿದರು. ವರ್ಷಗಳು ಉರುಳಿದಂತೆ ಜುಹೂ ಪ್ರದೇಶದ ಚಹರೆಯೇ ಬದಲಾಯಿತು. ದಿನದಿಂದ ದಿನಕ್ಕೆ ಆ ಜಾಗದಲ್ಲಿ ಜನಜಂಗುಳಿ ಹೆಚ್ಚಾಯಿತು. ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತಿದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ