AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರನ ನೆಲ ಸೇಲ್​ಗೆ; ಎಕರೆಗೆ 5,000 ರೂಗಿಂತ ಕಡಿಮೆ ಬೆಲೆ; ಚಂದ್ರನಲ್ಲಿ ಪ್ರಾಪರ್ಟಿ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

How To Buy Land In Moon? ಚಂದಿರನ ನಾಡಿನಲ್ಲಿ ಭೂಮಿಯಿಂದಲೇ ಜಮೀನು ಮಾರಾಟ ಮಾಡಲಾಗುತ್ತಿದೆ. ಕೆಲ ಬಾಲಿವುಡ್ ನಟರೂ ಸೇರಿ ಹಲವು ಭಾರತೀಯರು ಚಂದ್ರನಲ್ಲಿ ಪ್ರಾಪರ್ಟಿ ಹೊಂದಿದ್ಧಾರೆ. ಆದರೆ ಈ ಖರೀದಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಆಸಕ್ತಿ ಮತ್ತು ಸಮಾಧಾನಕ್ಕಾಗಿ ಜಮೀನು ಖರೀದಿಸಲು ಅಡ್ಡಿ ಇಲ್ಲ.

ಚಂದ್ರನ ನೆಲ ಸೇಲ್​ಗೆ; ಎಕರೆಗೆ 5,000 ರೂಗಿಂತ ಕಡಿಮೆ ಬೆಲೆ; ಚಂದ್ರನಲ್ಲಿ ಪ್ರಾಪರ್ಟಿ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 24, 2023 | 3:15 PM

ಬೆಂಗಳೂರು, ಆಗಸ್ಟ್ 24: ಇಸ್ರೋದ ಮೂರನೇ ಚಂದ್ರಯಾನ ಯಶಸ್ವಿಯಾದ ಬಳಿಕ ಭಾರತೀಯರಿಗೆ ಚಂದ್ರನ ಮೇಲಿರುವ ಕುತೂಹಲ ಹೆಚ್ಚಾಗಿದೆ. ಜಗತ್ತಿನ ಕಣ್ಣು ಭಾರತದ ತಂತ್ರಜ್ಞಾನ ವೃದ್ದಿಯತ್ತ ನೆಟ್ಟಿದೆ. ಇದೇ ವೇಳೆ, ಭಾರತದ ಉಪಗ್ರಹವಾಗಿರುವ ಚಂದ್ರನಲ್ಲಿ ಆಸ್ತಿ ಮಾರಾಟದ (Sale of Land In Moon) ವಿಚಾರ ಟ್ರೆಂಡಿಂಗ್​ನಲ್ಲಿದೆ. ಕೆಲ ಬಾಲಿವುಡ್ ತಾರೆಯರು ಚಂದ್ರನಲ್ಲಿ ಪ್ರಾಪರ್ಟಿ ಖರೀದಿಸಿರುವ ಸುದ್ದಿ ಹರಿದಾಡುತ್ತಿದೆ. ದಿವಂಗತ ಸುಶಾಂತ್ ಸಿಂಗ್ ರಾಜಪೂತ್ ಅವರು ಚಂದ್ರನ ಜಾಗ ಖರೀದಿ, ದೂರದರ್ಶಕದ ಮೂಲಕ ಅದನ್ನು ವೀಕ್ಷಿಸುತ್ತಿದ್ದರೆಂಬ ಮಾತುಗಳನ್ನು ಕೇಳಿರುತ್ತೇವೆ. ಹಾಗೆಯೇ, ಶಾರುಖ್ ಖಾನ್ ಕೂಡ ಚಂದ್ರನ ಒಂದು ಜಾಗದ ಮಾಲಕತ್ವ ಹೊಂದಿದ್ದಾರೆನ್ನಲಾಗಿದೆ.

ಚಂದ್ರನಲ್ಲಿ ಆಸ್ತಿ ಖರೀದಿಸಲು ಸಾಧ್ಯವೇ?

ಕಾನೂನು ಪ್ರಕಾರ ಚಂದ್ರನ ಆಸ್ತಿ ಸದ್ಯ ಯಾರಿಗೂ ಸೇರಿದ್ದಲ್ಲ. ಚಂದ್ರನ ಮೇಲೆ ಮೊದಲಿಗೆ ಕಾಲಿಟ್ಟ ಅಮೆರಿಕ, ರಷ್ಯಾ ದೇಶಗಳೂ ಕೂಡ ಅದರ ಜಾಗದ ಮೇಲೆ ಹಕ್ಕು ಸಾಧಿಸಲು ಆಗುವುದಿಲ್ಲ. ಯಾರೂ ಕೂಡ ಚಂದ್ರನಲ್ಲಿ ಜಾಗ ಖರೀದಿಸುವಂತಿಲ್ಲ ಎಂದು ಹಲವು ದಶಕಗಳ ಹಿಂದೆಯೇ ಅಮೆರಿಕ, ಬ್ರಿಟನ್ ಹಾಗು ಅಂದಿನ ಸೋವಿಯತ್ ರಷ್ಯಾ ದೇಶಗಳು ಬಾಹ್ಯಾಕಾಶ ಒಪ್ಪಂದವೊಂದಕ್ಕೆ ಸಹಿಹಾಕಿವೆ. ಈಗ ಭಾರತವೂ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ. ಹೀಗಾಗಿ, ಯಾರಿಗೂ ಕೂಡ ಅಧಿಕೃತವಾಗಿ ಚಂದ್ರನ ಜಾಗ ಸಿಕ್ಕುವುದಿಲ್ಲ. ಚಂದ್ರನ ಮೇಲೆ ಮಾನವನ ವಸಾಹತು ಶುರುವಾದಾಗ ದೇಶದೇಶಗಳ ಮಧ್ಯೆ ಪೈಪೋಟಿ ಏರ್ಪಡದಂತೆ ನಿಯಂತ್ರಿಸುವುದು ಈ ಒಪ್ಪಂದದ ಉದ್ದೇಶ.

ಆದರೂ ಕೂಡ ಅನಧಿಕೃತವಾಗಿ ಚಂದ್ರನ ಜಾಗವನ್ನು ಮಾರಲಾಗುತ್ತಿದೆ. ವಾಸ್ತವವಾಗಿ ಈ ಜಾಗ ನಿಮ್ಮದಾಗುವುದಿಲ್ಲ. ಈ ಮಾರಾಟಕ್ಕೆ ಅಧಿಕೃತತೆ ಇಲ್ಲ. ಮಾನಸಿಕ ಸಮಾಧಾನಕ್ಕೆ ಬೇಕಾದರೆ ಜಮೀನು ಖರೀದಿಸಬಹುದು.

ಇದನ್ನೂ ಓದಿ: ಚಂದ್ರನ ಮೇಲೆ ಸ್ಥಳ ಹೊಂದಿರುವ ಬಾಲಿವುಡ್ ನಟರು ಯಾರು ಗೊತ್ತೆ?

ಚಂದ್ರನಲ್ಲಿ ಜಮೀನು ಖರೀದಿಸುವುದು ಹೇಗೆ?

ಭಾರತೀಯರು ಚಂದ್ರನಲ್ಲಿ ಜಮೀನು ಖರೀದಿಸುವ ಆಸಕ್ತಿ ಹೊಂದಿದ್ದರೆ ಈ ಕ್ರಮ ಅನುಸರಿಸಬಹುದು. ಅದಕ್ಕಾಗಿ ಲೂನಾರ್ ರಿಜಿಸ್ಟ್ರಿ ವೆಬ್​ಸೈಟ್​ಗೆ ಭೇಟಿ ನೀಡಬಹುದು. ಅದರ ಯುಆರ್​ಎಲ್ ಹೀಗೆ: lunarregistry.com

ಚಂದ್ರನಲ್ಲಿ ಬೇ ಆಫ್ ರೈನ್​ಬೋಸ್, ಸೀ ಆಫ್ ರೈನ್ಸ್, ಲೇಕ್ ಆಫ್ ಡ್ರೀಮ್ಸ್, ಸೀ ಆಫ್ ಸಿರಿನಿಟಿ ಎಂಬಿತ್ಯಾದಿ ಪ್ರದೇಶಗಳಲ್ಲಿ ಜಮೀನು ಖರೀದಿಸುವ ಆಯ್ಕೆಗಳನ್ನು ಈ ವೆಬ್​ಸೈಟ್ ನೀಡುತ್ತದೆ.

ಯಾವ ಪ್ರದೇಶದಲ್ಲಿ ಜಮೀನು ಬೇಕೆಂದು ಆಯ್ದುಕೊಂಡರೆ ಅಲ್ಲಿ ವಿವಿಧ ಅಳತೆಯ ಜಮೀನುಗಳ ಪಟ್ಟಿ ಕಾಣಿಸುತ್ತದೆ.

ಇದನ್ನೂ ಓದಿ: ಚಂದ್ರಯಾನ 3 ಯಶಸ್ವಿಯಾದರೆ ನಮಗೂ ನಿಮಗೂ ಏನು ಲಾಭ, ಸರಳ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಿ

ಒಂದು ಎಕರೆ ಚಂದ್ರನ ನೆಲಕ್ಕೆ ಸುಮಾರು 30-40 ಡಾಲರ್ ಮಾತ್ರವೇ ಬೆಲೆ ನಿಗದಿ ಮಾಡಲಾಗಿದೆ. ಅಂದರೆ ಒಂದು ಎಕರೆ ಜಾಗ ಕೇವಲ 2,500ರಿಂದ 3,500 ರೂಗೆ ಸಿಗುತ್ತದೆ. 500 ಎಕರೆಗಿಂತ ಹೆಚ್ಚು ಜಾಗ ಖರೀದಿಸಿದರೆ ಇಎಂಐ ಸೌಲಭ್ಯವೂ ಸಿಗುತ್ತದೆ.

ಚಂದ್ರನಲ್ಲಿ ಜಾಗ ಖರೀದಿ ಮಾಡಿದ ಬಳಿಕ ನೀವು ಆಯ್ದುಕೊಂಡ ಜಾಗದ ಸೆಟಿಲೈಟ್ ಚಿತ್ರ, ಅದರ ಸ್ಥಳ ವಿವರ ಇವೆಲ್ಲವೂ ನಿಮಗೆ ಸಿಗುತ್ತದೆ.

ಇಲ್ಲಿ ಮತ್ತೊಮ್ಮೆ ಸ್ಪಷ್ಟಪಡಿಸುವುದಾದರೆ, ಚಂದ್ರನಲ್ಲಿ ನೀವು ಜಾಗ ಖರೀದಿಸಿದರೂ ಅದಕ್ಕೆ ಮಾನ್ಯತೆ ಇರುವುದಿಲ್ಲ. ಅಕಸ್ಮಾತ್ ಚಂದ್ರನಲ್ಲಿ ಮಾನವನ ವಸಾಹತು ಶುರುವಾದರೂ ಕೂಡ ನೀವು ಈಗ ಖರೀದಿಸಿರುವ ಜಮೀನಿನ ಮೇಲೆ ನೀವು ಹಕ್ಕು ಸ್ಥಾಪಿಸಲು ಆಗುವುದಿಲ್ಲ. ಸುಮ್ಮನೆ ಸಮಾಧಾನಕ್ಕೆ ಚಂದ್ರನಲ್ಲಿ ಜಾಗ ಖರೀದಿಸಲು ಅಡ್ಡಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ