ಅಂಗನವಾಡಿಯಲ್ಲಿ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಆಶ್ಚರ್ಯಗೊಂಡ ಸಚಿವ ಬಸವಂತಪ್ಪ
ದಾವಣಗೆರೆ ತಾಲೂಕಿನ ಕಾಟೀಹಳ್ಳಿ ಅಂಗನವಾಡಿಗೆ ಸಚಿವ ಕೆ.ಎಸ್. ಬಸವಂತಪ್ಪ ಭೇಟಿ ನೀಡಿದಾಗ ಅಚ್ಚರಿ ಕಾದಿತ್ತು. ಮಕ್ಕಳು ಸೊಳ್ಳೆಪರದೆ ಹಾಕಿ ಮಲಗಿದ್ದನ್ನು ನೋಡಿ, ಸಚಿವರು "ಪಾಠ ಮಾಡಿಸದೆ ಏಕೆ ಮಲಗಿಸಿದ್ದೀರಿ?" ಎಂದು ಶಿಕ್ಷಕಿಯರನ್ನು ಪ್ರಶ್ನಿಸಿದರು. ಇದಕ್ಕೆ ಶಿಕ್ಷಕಿಯರು, "ಇದು ಮಕ್ಕಳ ವಿಶ್ರಾಂತಿ ಸಮಯ" ಎಂದು ಸ್ಪಷ್ಟಪಡಿಸಿದರು.
ದಾವಣಗೆರೆ, ಸೆಪ್ಟೆಂಬರ್ 28: ವಿವಿಧ ಕಾಮಗಾರಿಗಳ ಉದ್ಘಾಟನೆಗೆ ತೆರಳಿದ್ದ ಸಚಿವ ಕೆ.ಎಸ್.ಬಸವಂತಪ್ಪ, ಗ್ರಾಮದ ಶಾಲೆ ಹಾಗೂ ಅಂಗನವಾಡಿಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಅಂಗನವಾಡಿಯಲ್ಲಿ ಸೊಳ್ಳೆ ಪರದೆ ಹಾಕಿಕೊಂಡು ಮಕ್ಕಳು ಮಲಗಿದ್ದು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ತಾಲೂಕಿನ ಕಾಟೀಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಘಟನೆ ನಡೆದಿದೆ. ‘ಪಾಠ ಮಾಡುವುದು ಬಿಟ್ಟು ಏಕೆ ಮಲಗಿಸಿದ್ದೀರೆಂದು’ ಸಚಿವ ಕೆ.ಎಸ್.ಬಸವಂತಪ್ಪ ಪ್ರಶ್ನಿಸಿದ್ದು, ‘ಈಗ ಮಕ್ಕಳ ವಿಶ್ರಾಂತಿ ಸಮಯ’ ಎಂದು ಅಂಗನವಾಡಿಯ ಶಿಕ್ಷಕಿಯರು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us