ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ ಮತ್ತು ಎಲ್ಲಿ?

Updated on: Dec 15, 2025 | 7:32 PM

ದಾವಣಗೆರೆಯ ಆನೆಕೊಂಡದಲ್ಲಿರೋ ಶಾಮನೂರು ಒಡೆತನದ ಕಲ್ಲೇಶ್ವರ ರೈಸ್‌ಮಿಲ್ ಆವರಣದಲ್ಲಿ ಇಂದು ಶಾಮನೂರು ಶಿವಶಂಕರಪ್ಪ ಅವರ ಅಂತಿಮ ವಿಧಿವಿಧಾನ ನೆರವೇರಿತು. ಮಠಾಧೀಶರು, ರಾಜಕೀಯ ನಾಯಕರು ಭಾಗವಹಿಸಿದ್ದರು. ಇನ್ನು ಡಿಸೆಂಬರ್ 26ರಂದು ಮಧ್ಯಾಹ್ನ 12.30ಕ್ಕೆ ಕಲ್ಲೇಶ್ವರ ಮಿಲ್​ ಆವರಣದಲ್ಲೇ ಕೈಲಾಸ ಶಿವಗಣಾರಾಧನೆ ನಡೆಯಲಿದೆ ಎಂದು ಕುಟುಂಬಸ್ಥರು ಆಹ್ವಾನ್​ ನೀಡಿದ್ದಾರೆ.

ದಾವಣಗೆರೆ, ಡಿಸೆಂಬರ್​​ 15: ದಾವಣಗೆರೆಯ ಧಣಿ ಅಂತಾನೇ ಕರೆಸಿಕೊಳ್ಳುತ್ತಿದ್ದ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರು ತಮ್ಮ ಸುಧೀರ್ಘ, ಸಾರ್ಥಕ ಬದುಕಿನ ಪಯಣ ಅಂತ್ಯಗೊಳಿಸಿದ್ದಾರೆ. ಇಂದು ನಗರದ ಕಲ್ಲೇಶ್ವರ ಮಿಲ್ ಆವರಣದಲ್ಲಿ ಪಂಚಪೀಠದ ಜಗದ್ಗುರುಗಳ ಸಮ್ಮುಖದಲ್ಲಿ ಪತ್ನಿ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನು ಡಿಸೆಂಬರ್ 26ರಂದು ಮಧ್ಯಾಹ್ನ 12.30ಕ್ಕೆ ಕಲ್ಲೇಶ್ವರ ಮಿಲ್​ ಆವರಣದಲ್ಲೇ ಕೈಲಾಸ ಶಿವಗಣಾರಾಧನೆ ನಡೆಯಲಿದೆ. ಶಾಮನೂರು ಶಿವಶಂಕರಪ್ಪ ಅವರ ಪುತ್ರರಾದ ಬಕ್ಕೇಶ್, ಗಣೇಶ್ ಮತ್ತು ಮಲ್ಲಿಕಾರ್ಜುನ್ ಕುಟುಂಬಸ್ಥರಿಂದ ಆಹ್ವಾನಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Dec 15, 2025 07:31 PM