ದಾವಣಗೆರೆಯಲ್ಲೂ ಕೆಲ ವಿದ್ಯಾರ್ಥಿನಿಯರು ಶಿಕ್ಷಣದ ಜೊತೆ ಧರ್ಮವೂ ಮುಖ್ಯ ಎನ್ನುತ್ತಿದ್ದಾರೆ

ದಾವಣಗೆರೆಯಲ್ಲೂ ಕೆಲ ವಿದ್ಯಾರ್ಥಿನಿಯರು ಶಿಕ್ಷಣದ ಜೊತೆ ಧರ್ಮವೂ ಮುಖ್ಯ ಎನ್ನುತ್ತಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2022 | 11:08 PM

ಆದರೆ, ಕೆಲ ವಿದ್ಯಾರ್ಥಿನಿಯರು ಪರೀಕ್ಷೆಗಳನ್ನು ಬರೆಯದೆ ಮನೆಗಳಿಗೆ ವಾಪಸ್ಸು ಹೋಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ತಮ್ಮ ಅಮೂಲ್ಯ ಒಂದು ವರ್ಷ ಹಾಳಾಗುವ ಬಗ್ಗೆ ಅವರು ಯೋಚಿಸುತ್ತಿಲ್ಲ.

ದಾವಣಗೆರೆಯಲ್ಲಿ (Davanagere) ಬುಧವಾರರ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಆದರೆ ಮುಸ್ಲಿ ಸಮುದಾಯದ ಈ ನಾಲ್ವರು ವಿದ್ಯಾರ್ಥಿನಿಯರು ಹಿಜಾಬ್ ಗೋಸ್ಕರ ಪ್ರತಿಭಟನೆ ನಡೆಸುವುದನ್ನು ನಿಲ್ಲಿಸಲಿಲ್ಲ. ಹಿಜಾಬ್ ಧಾರ್ಮಿಕ ಆಚರಣೆಯ (religious practice) ಭಾಗವಲ್ಲ, ಹಾಗಾಗಿ ಅದನ್ನು ಶಾಲಾ ಕಾಲೇಜುಗಳಿಗೆ ಧರಿಸಿ ಬರುವಂತಿಲ್ಲ ಎಂದು ಮಾರ್ಚ್ 15 ರಂದು ರಾಜ್ಯ ಹೈಕೋರ್ಟ್ ನ ತ್ರಿಸದಸ್ಯ ಪೀಠ (three-member bench) ತೀರ್ಪು ನೀಡಿದೆ. ಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ, ಎಂದು ಹೇಳುತ್ತಿದ್ದ ವಿದ್ಯಾರ್ಥಿನಿಯರು ಅದು ಹೊರಬಿದ್ದ ಮೇಲೆ ಪಾಲಿಸಲು ಹಿಂದೆಗೆಯುತ್ತಿದ್ದಾರೆ. ಎಲ್ಲರೂ ಪ್ರತಿಭಟನೆ ನಡೆಸುತ್ತಾ ತರಗತಿ ಮತ್ತು ಪರೀಕ್ಷೆಗಳನ್ನು ಬಹಿಷ್ಕರಿಸುತ್ತಿಲ್ಲ. ಅನೇಕರು ತೀರ್ಪನ್ನು ಪಾಲಿಸಿ ಹಿಜಾಬ್ ಧರಿಸದೆ ಕಾಲೇಜುಗಳಿಗೆ ಹೋಗುತ್ತಿದ್ದಾರೆ ಮತ್ತು ಪರೀಕ್ಷೆಗಳನ್ನೂ ಬರೆಯುತ್ತಿದ್ದಾರೆ. ಅವರ ಪಾಲಕರಿಗೆ ಮತ್ತು ಖುದ್ದು ವಿದ್ಯಾರ್ಥಿನಿಯರಿಗೆ ತಮ್ಮ ಭವಿಷ್ಯದ ಬಗ್ಗೆ ಕಾಳಜಿಯಿದೆ.

ಆದರೆ, ಕೆಲ ವಿದ್ಯಾರ್ಥಿನಿಯರು ಪರೀಕ್ಷೆಗಳನ್ನು ಬರೆಯದೆ ಮನೆಗಳಿಗೆ ವಾಪಸ್ಸು ಹೋಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ತಮ್ಮ ಅಮೂಲ್ಯ ಒಂದು ವರ್ಷ ಹಾಳಾಗುವ ಬಗ್ಗೆ ಅವರು ಯೋಚಿಸುತ್ತಿಲ್ಲ. ಯಾದಗಿರಿ ಜಿಲ್ಲೆಯ ಒಂದು ಪಿಯು ಕಾಲೇಜಿನಲ್ಲಿ 35 ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ 15 ವಿದ್ಯಾರ್ಥಿನಿಯರು ಪರೀಕ್ಷೆಗಳನ್ನು ತೊರೆದು ಮನೆಗೆ ವಾಪಸ್ಸು ಹೋಗಿದ್ದಾರೆ. ತಂದೆ ತಾಯಿಗಳು ಅವರ ಭವಿಷ್ಯದ ಬಗ್ಗೆ ಯೋಚಿಸಬೇಕಿದೆ.

ದಾವಣಗೆರೆ ಕಾಲೇಜೊಂದರ ಈ ವಿದ್ಯಾರ್ಥಿನಿಯರು ಸಹ ನಮಗೆ ಹಿಜಾಬ್ ಧರಿಸುವ ಅವಕಾಶ ನೀಡಬೇಕು ಅಂತ ಪ್ಲಕಾರ್ಡ್​ಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಅವಕಾಶ ನೀಡಿಲ್ಲವೆಂದರೆ ಪರೀಕ್ಷೆ ಬರೆಯುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಶಿಕ್ಷಣದ ಎಷ್ಟು ಮುಖ್ಯವೋ ಧರ್ಮವೂ ಅಷ್ಟೇ ಮುಖ್ಯ ಎನ್ನುತ್ತಿದ್ದಾರೆ.

ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ?

ಇದನ್ನೂ ಓದಿ:  ಭಟ್ಕಳ: ಹಿಜಾಬ್ ತೀರ್ಪು ಹಿನ್ನೆಲೆ ಬಲವಂತವಾಗಿ ಅಂಗಡಿ ಬಂದ್; ಪಿಎಫ್​ಐ ಕಾರ್ಯಕರ್ತರು, ವಕೀಲನ ವಿರುದ್ಧ ಪ್ರಕರಣ ದಾಖಲು