ದಾವಣಗೆರೆ: ಎಳೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಶಾಸನ ಪತ್ತೆ, ಅನೇಕ ವಿಚಾರಗಳು ಉಲ್ಲೇಖ
ಹರಿಹರ ತಾಲೂಕಿನ ಐತಿಹಾಸಿಕ ಹಿನ್ನೆಲೆ ಇರುವ ಎಕಲೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಕಾಲದ ಶಾಸನ ಪತ್ತೆಯಾಗಿದೆ. ಕಪ್ಪು ಕಲ್ಲಿನಲ್ಲಿ ಕೆತ್ತಲಾದ ನಾಲ್ಕು ಅಡಿ ಉದ್ದ, ಎರಡು ಅಡಿ ಅಗಲದ ಐದು ಸಾಲಿನ ಶಾಸನ ಸಿಕ್ಕಿದೆ. ಇಲ್ಲಿ ಈವರೆಗೆ ಐದು ಶಾಸನಗಳು ಸಿಕ್ಕಿವೆ. ಇನ್ನಷ್ಟು ಶಾಸನಗಳು ಸಿಗುವ ಸಾಧ್ಯತೆಗಳಿವೆ ಎಂದು ಶಾಸನ ತಜ್ಞ ಕೆ.ರವಿಕುಮಾರ್ ಅವರು ಮಾಹಿತಿ ನೀಡಿದರು.
ದಾವಣಗೆರೆ, ಅ.13: ಜಿಲ್ಲೆಯ ಹರಿಹರ ತಾಲೂಕಿನ ಐತಿಹಾಸಿಕ ಹಿನ್ನೆಲೆ ಇರುವ ಎಕಲೆಹೊಳೆ ಗ್ರಾಮದಲ್ಲಿ ಕ್ರಿಶ 1271ರ ಕಾಲದ ಶಾಸನ ಪತ್ತೆಯಾಗಿದೆ. ಕಪ್ಪು ಕಲ್ಲಿನಲ್ಲಿ ಕೆತ್ತಲಾದ ನಾಲ್ಕು ಅಡಿ ಉದ್ದ, ಎರಡು ಅಡಿ ಅಗಲದ ಐದು ಸಾಲಿನ ಶಾಸನ ಸಿಕ್ಕಿದೆ. ದೇವಗಿರಿಯ ಯಾದವರೆಂದೇ ಪ್ರಸಿದ್ದರಾಗಿದ್ದ ಸೇವುಣರ ಕಾಲದ ಶಾಸನ ಇದು ಎಂದು ತಿಳಿದು ಬಂದಿದೆ. ಶಾಸನ ತಜ್ಞ ಕೆ.ರವಿಕುಮಾರ್ ಅವರು ಈ ಶಾಸನ ಅಧ್ಯಯನಕ್ಕಿಳಿದಿದ್ದಾರೆ.
ಯಾದವ ನಾರಾಯಣ ಭುಜಬಳ ಪ್ರೌಢ ಪ್ರತಾಪ ಚಕ್ರವರ್ತಿಯ ಬಿರುದಾವಳಿ ಬಗ್ಗೆ ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಯಾದವರ ದೊರೆ ರಾಮಚಂದ್ರನ ಆಡಳಿತಾವಧಿಯನ್ನ ಈ ಶಾಸನ ಸೂಚಿಸುತ್ತದೆ. ಯಾದವ ದೊರೆಗಳು ಗೋವುಗಳನ್ನ ಕದಿಯುತ್ತಿದ್ದ ಶತ್ರುಗಳ ವಿರುದ್ಧ ಹೋರಾಟ ನಡೆಸಿ ಸಾವನ್ನಪ್ಪಿರುವ ವಿಚಾರ ಇದರಲ್ಲಿದೆ. ಎಳೆಹೊಳೆ ಗ್ರಾಮ ವೀರರ ಪ್ರದೇಶ. ಇಲ್ಲಿ ಈವರೆಗೆ ಐದು ಶಾಸನಗಳು ಸಿಕ್ಕಿವೆ. ಇನ್ನಷ್ಟು ಶಾಸನಗಳು ಸಿಗುವ ಸಾಧ್ಯತೆಗಳಿವೆ ಎಂದು ಶಾಸನ ತಜ್ಞ ಕೆ.ರವಿಕುಮಾರ್ ಅವರು ಮಾಹಿತಿ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ