ದಾವಣಗೆರೆ: ನೀಲಿ ಬಣ್ಣದ ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದ ನಾಟಿಕೋಳಿ! ವಿಡಿಯೋ ನೋಡಿ

Edited By:

Updated on: Aug 26, 2025 | 10:12 AM

ದಾವಣಗೆರೆಯ ಚನ್ನಗಿರಿಯ ಗ್ರಾಮವೊಂದರಲ್ಲಿ ನಾಟಿಕೋಳಿಯೊಂದು ನೀಲಿ ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದೆ. ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಸಹ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಮುಂದಿ ನಿರಂತರವಾಗಿ ಇದೇ ರೀತಿ ಮೊಟ್ಟೆ ಇಟ್ಟರೆ ಸಂಶೋಧನೆ ನಡೆಸುವುದಾಗಿ ತಿಳಿಸಿದ್ದಾರೆ. ಈಗ ನೀಲಿ ಮೊಟ್ಟೆ ಇಟ್ಟಿರುವುದಕ್ಕೆ ಕಾರಣ ಏನಿರಬಹುದೆಂದೂ ಅವರು ತಿಳಿಸಿದ್ದಾರೆ. ನೀಲಿ ಮೊಟ್ಟೆಯ ವಿಡಿಯೋ ಇಲ್ಲಿದೆ.

ದಾವಣಗೆರೆ, ಆಗಸ್ಟ್ 26: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸೈಯದ್ ನೂರ್ ಎಂಬುವರ ಮನೆಯಲ್ಲಿರುವ ನಾಟಿ ಕೋಳಿ ನೀಲಿ ಬಣ್ಣದ ಮೊಟ್ಟೆ ಇಟ್ಟು ಅಚ್ಚರಿ ಮೂಡಿಸಿದೆ. ಸೈಯದ್ ನೂರ್ ಹತ್ತು ನಾಟಿ ಕೋಳಿ ಸಾಕಿದ್ದು, ಮಾಮೂಲಾಗಿ ಬಿಳಿ ಮೊಟ್ಟೆ ಇಡುತ್ತಿದ್ದ ಒಂದು ನಾಟಿ ಕೋಳಿ ನೀಲಿ ಮೊಟ್ಟೆ ಇಟ್ಟಿದೆ. ನಾಟಿ ಕೋಳಿ ನೀಲಿ ಬಣ್ಣದ ಮೊಟ್ಟೆ ಇಟ್ಟಿದ್ದಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಕೂಡ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಮೆದೊಜೀರಕಾಂಗದಲ್ಲಿ ಬಿಲಿವರ್ಡಿನ್ ಎಂಬ ವರ್ಣ ದ್ರವ್ಯದ ಕಾರಣಕ್ಕೆ ನೀಲಿ ಬಣ್ಣ ಬಂದಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮೊಟ್ಟೆಯ ಮೇಲ್ಭಾಗ ಮಾತ್ರ ನೀಲಿ ಇದ್ದು, ಉಳಿದಂತೆ ಮಾಮೂಲಾಗಿ ಇದೆ. ಒಂದು ವೇಳೆ ಕೋಳಿ ಮುಂದೆ ನಿರಂತರವಾಗಿ ನೀಲಿ ಮೊಟ್ಟೆ ಹಾಕಿದರೆ ವೈಜ್ಞಾನಿಕವಾಗಿ ಅಧ್ಯಯನಕ್ಕೆ ಒಳಪಡಿಸಲಾಗುವುದು ಎಂದು ಚನ್ನಗಿರಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅಶೋಕ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More