ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್​​: ಕಾರಣ ಇಲ್ಲಿದೆ

Edited By:

Updated on: Sep 20, 2026 | 9:32 PM

ಚಿಕ್ಕಬಳ್ಳಾಪುರ ಡಿಸಿ ಪ್ರಭು ಅವರು ಶಿಡ್ಲಘಟ್ಟ ತಹಶೀಲ್ದಾರ್ ಕುಮಾರಿ ಗಗನ ಸಿಂಧು ಅವರನ್ನು ಸಾರ್ವಜನಿಕರ ಸಮ್ಮುಖದಲ್ಲಿ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡದಿರುವುದು, ಅರ್ಜಿಗಳಿಗೆ ಹಿಂಬರಹ ನೀಡದಿರುವುದು, ಕಡತಗಳ ವಿಲೇವಾರಿ ಮಾಡದಿರುವುದು ಮತ್ತು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಡಿಸಿ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ನಿರ್ಲಕ್ಷ್ಯದಿಂದ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರ, ಸೆಪ್ಟೆಂಬರ್​​ 20: ಪ್ರಜಾಸೇವಾ ಆಂದೋಲನದ ಕುರಿತು ಮಾಹಿತಿ ನೀಡದ ಆರೋಪ ಸಂಬಂಧ ಚಿಕ್ಕಬಳ್ಳಾಪುರ ಡಿಸಿ ಜಿ.ಪ್ರಭು ಶಿಡ್ಲಘಟ್ಟ ತಹಶೀಲ್ದಾರ್​​ ಗನ ಸಿಂಧೂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಡ್ಲಘಟ್ಟ ತಾಲೂಕಿನ ವೈ.ಹುನಸೇನಹಳ್ಳಿಯಲ್ಲಿ ನಿನ್ನೆ ಘಟನೆ ನಡೆದಿದ್ದು, ತಹಶೀಲ್ದಾರ್ ಕಚೇರಿಯಲ್ಲಿ ಕಡತಗಳ ವಿಲೇವಾರಿ ಮಾಡದ ಆರೋಪವೂ ತಹಶೀಲ್ದಾರ್​​ ವಿರುದ್ಧ ಕೇಳಿಬಂದಿತ್ತು. ದೂರು ನೀಡುವ ಜನರಿಗೆ ಹಿಂಬರಹ, ಸೂಕ್ತ ದಾಖಲೆ ನೀಡದ ಬಗ್ಗೆಯೂ ದೂರಿನ ಹಿನ್ನೆಲೆ ಡಿಸಿ ತಹಶೀಲ್ದಾರ್​​ ಮೇಲೆ ಗರಂ ಆದ ಪ್ರಸಂಗ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More